ಬ್ರೇಕಿಂಗ್ ನ್ಯೂಸ್

ಪಿಕೆಪಿಸ್ ನಿವೃತ್ತಿ ಮುಖ್ಯ ನಿರ್ವಾಹಕರ ಚನ್ನಪ್ಪ ಗೆ ಸನ್ಮಾನ

ನಾಗನೂರ ಪಿ.ಕೆ :ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ನಾಗನೂರ ಪಿ.ಕೆ ಇದರ ಮುಖ್ಯಕಾರ್ಯ ನಿರ್ವಾಹಕರಾದ ಶ್ರೀ ಚನ್ನಪ್ಪ ಅಣ್ಣಪ್ಪ ಹಂಚಿನಾಳ ಇವರು ಸೇವಾ ನಿವೃತ್ತಿ ಹೊಂದಿದರು ಇವರನ್ನು ಸಂಘದ ಕಚೇರಿಯಲ್ಲಿ ಸನ್ಮಾನಿಸಲಾಯಿತು. ಇವರು ಸುಮಾರು 42 ವರ್ಷಗಳ ವರೆಗೆ ಸಂಘದ ಮುಖ್ಯ ಕಾರ್ಯನಿರ್ವಾಹಕರಾಗಿ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿರುತ್ತಾರೆ ಅವರಿಗೆ ಅಬಿನಂದನೆ ಸಲ್ಲಿಸಿಲಾಯಿತು.
ಈ ಸಂಧರ್ಬದಲ್ಲಿ ಮಾತನಾಡಿದ ಚನ್ನಪ್ಪ ಹಂಚಿನಾಳ ಅವರು ಗ್ರಾಮದ ಜನÀರು ಹಾಗೂ ಆಡಳಿತ ಮಂಡಳಿಯು ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿದ್ದರಿಂದ 42 ವರ್ಷಗಳ ಕಾಲ ಸೇವೆ ಸಲ್ಲಿಸಲು ಸಾದ್ಯವಾಯಿತು ಎಂದು ತಿಳಿಸಿದರು.
ಈ ಸಮಯದಲ್ಲಿ ಸಂಘದ ಅದ್ಯಕ್ಷರಾದ ಶ್ರೀ ಪರಪ್ಪ ಸವದಿ ಹಾಗೂ ಉಪಾದ್ಯಕ್ಷರಾದ ಶ್ರೀ ಎಚ್ ಎಮ್ ಹುದ್ದಾರ, ಆಡಳಿತ ಮಂಡಳಿಯ ಸದಸ್ಯರಾದ ಬಿ ಕೆ ತೇಲಿ, ಆರ್ ಎಮ್ ಐಗಳಿ, ಜಿ ಎಸ್ ಬಿಳ್ಳೂರ, ಎಮ್ ಬಿ ಚೌಗಲಾ, ಹಾಗೂ ಸಂಘದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

About the author

Mallu Bolanavar