ಬ್ರೇಕಿಂಗ್ ನ್ಯೂಸ್

ಮುಗಳಖೋಡ ಪಟ್ಟಣದ ಹನುಮಾನ ದೇವರ ಓಕಳಿ ಉತ್ಸವ

ಮುಗಳಖೋಡ: ಪಟ್ಟಣದಲ್ಲಿ ಶ್ರೀ ಹನುಮಾನ ದೇವರ ಓಕಳಿ ಉತ್ಸವ ಔಪಚಾರಿಕವಾಗಿ, ಶಾಂತಿಯುತವಾಗಿ ಸೋಮವಾರ sಸಾಮಾಜಿಕ ಅಂತರದೊ0ದಿಗೆ ನೆರವೇರಿತು. ಬೆಳಿಗ್ಗೆ ಹನುಮಾನÀ ದೇವರಿಗೆ ಅರ್ಚಕರಿಂದ ಮಜ್ಜನ, ಎಲಿಪೂಜೆ, ಅಭಿಷೇಕದೊಂದಿಗೆ ಪೂಜೆ ಪ್ರಾರಂಭಿಸಿ, ಮಧ್ಯಾಹ್ನ ಅನ್ನಪ್ರಸಾದ ವ್ಯವಸ್ಥೆ ನೆರವೇರಿಸಿ. ಸಾಯಂಕಾಲ 5 ಗಂಟೆಗೆ ಕೊಂಡ ಪೂಜೆ ಮಾಡಿ ಪಲ್ಲಕ್ಕಿ ಉತ್ಸವದೊಂದಿಗೆ ಓಕಳಿ ಉತ್ಸವ ಮುಕ್ತಾಯಗೊಂಡಿತು.
ಈ ಸಂದರ್ಭದಲ್ಲಿ ರಾಜುಗೌಡ ನಾಯಿಕ, ಕೃಷ್ಣಾ ನಾಯಿಕ, ಶಿವಬಸು ಕಾಪಸಿ, ಉದಯಕುಮಾರ ನಾಯಿಕ, ಸೂರ್ಯಕಾಂತ ನಾಯಿಕ, ಹಣಮಂತ ಶೇಗುಣಸಿ, ಭಗವಂತ ಗುಮಟಿ, ಚಂದ್ರಕಾAತ ನಾಯಿಕ, ಅಪ್ಪಾಸಾಹೇಬ ನಾಯಿಕ, ವಿಠ್ಠಲ ಪೂಜೇರಿ, ದಿಲೀಪ ನಾಯಿಕ, ರಾಜು ಹೊಸಪೇಟಿ ಇದ್ದರು.

About the author

Mallu Bolanavar