ಬ್ರೇಕಿಂಗ್ ನ್ಯೂಸ್

ಕಾರ್ಮಿಕ ವಿರೋಧಿ ನೀತಿ ತಿದ್ದುಪಡಿಗೆ ಡಾ. ಅರ್ಜುನ ಬಂಡಿ ಖಂಡನೆ.


ಬೈಲಹೊಂಗಲ: ರಾಜ್ಯ ಮತ್ತು ಕೇಂದ್ರಸರ್ಕಾರದ ಕಾರ್ಮಿಕ ವಿರೊಧಿ ನೀತಿಯನ್ನು ಖಂಡಿಸಿ ಕಾರ್ಮಿಕರ ಹಿತ ಕಾಯಲು ಕರ್ನಾಟಕ ಅಂಬೇಡ್ಕರ್ ಯುವ ಸೇನೆ ಸಂಸ್ಥಾಪಕ ಅಧ್ಯಕ್ಷ ಡಾ. ಅರ್ಜುನ ಬಂಡಿ ರಾಜ್ಯಪಾಲರಲ್ಲಿ ಪತ್ರಿಕೆ ಮೂಲಕ ಮನವಿ ಮಾಡಿದರು.
ಪತ್ರಿಕೆ ಪ್ರಕಟಣೆ ನೀಡಿರುವ ಅವರು ಗುಜರಾತ್, ಉತ್ತರ ಪ್ರದೇಶ,ಮತ್ತು ಮಧ್ಯಪ್ರದೇಶ ರಾಜ್ಯಗಳು ಈಗಾಗಲೇ ಕಾರ್ಮಿಕ ವಿರೋಧಿ ನೀತಿ ಅನುಸರಿಸಿದ್ದು ಅವುಗಳ ಮಾದರಿಯಲ್ಲಿ ರಾಜ್ಯದಲ್ಲಿ ಕಾರ್ಮಿಕ ವಿರೋಧಿ ನೀತಿ ಅನುಸರಿಸುವದು ಸರಿಯಲ್ಲ.
ಕಾರ್ಮಿಕರ ದುಡಿ ಯುವ ಅವಧಿಯನ್ನು 8 ಗಂಟೆಯಿಂದ 10 ಗಂಟೆಗೆ ಹೆಚ್ಚಿಸುತ್ತಿರುವದು ಅವೈಜ್ಞಾನಿಕ ಪಧ್ದತಿ ಆಗಿದೆ ಆದ್ದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಾರ್ಮಿಕರ ಆರೋಗ್ಯದ ಹಿತದೃಷ್ಟಿ ಕಾಯಬೇಕು ಮತ್ತು ವಲಸೆ ಕಾರ್ಮಿಕರಿಗೆ ಅವರ ಊರುಗಳಿಗೆ ತೆರಳಲು ಉಚಿತ ರೈಲು ಮತ್ತು ಸಾರಿಗೆ ವ್ಯವಸ್ಥೆ ಅನುಕೂಲ ಕಲ್ಪಿಸುವದರ ಜೊತೆಗೆ ಅಮಾನತ್ತಿನಲ್ಲಿ ಇಡುತ್ತಿರುವ ಕಾರ್ಮಿಕ ಕಾಯ್ದೆಯನ್ನು ಅಮಾನತ್ತು ತೆರವುಗೊಳಿಸಿ ಯಥಾ ಸ್ಥಿತಿ ಕಾಪಾಡಬೇಕೆಂದು ಇಲ್ಲವಾದಲ್ಲಿ ಅಂಬೇಡ್ಕರ್ ಯುವ ಸೇನೆ ಮೂಲಕ ರಾಜ್ಯಧ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಸರಕಾರಕ್ಕೆ ಎಚ್ಚರ ನೀಡಿದರು.

About the author

Mallu Bolanavar