ಬ್ರೇಕಿಂಗ್ ನ್ಯೂಸ್

ಸೈದಾಪುರದಲ್ಲಿ ಕೊರೊನಾ ವಾರಿರ‍್ಸ್ಗೆ ಕೃತಜ್ಞತೆ ಮತ್ತು ಸತ್ಕಾರ

ಮಹಾಲಿಂಗಪುರ: ಸಮೀಪದ ಸೈದಾಪೂರ-ಸಮೀರವಾಡಿಯ ಗಾಂಧಿ ಭವನದಲ್ಲಿ ಇತ್ತೀಚೆಗೆ ಕೊರೊನಾ ವಾರಿರ‍್ಸ್ಗೆ ಕೃತಜ್ಞತೆ ಹಾಗೂ ಸನ್ಮಾನ ಸಮಾರಂಭ ಜರುಗಿತು.
ಅಕ್ಕ ಮಹಾದೇವಿ ಗ್ರಾಮಿಣಾಭಿವೃದ್ದಿ ಸೇವಾ ಸಂಘ ಹಾಗೂ ಮಹಾಲಿಂಗಪ್ಪ ಸನದಿ ಅಭಿಮಾನಿ ಬಳಗ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಪಂಚಾಯಿತಿ ಸಿಬ್ಬಂದಿ ಸೇರಿ 40ಕ್ಕೂ ಹೆಚ್ಚು ಕೊರೊನಾ ವಾರಿರ‍್ಸ್ಗೆ ಹಾರ, ತುರಾಯಿ, ಫಲಪುಷ್ಪ ಹಾಗೂ ಕೃತಜ್ಞತಾ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು. ಸರ್ವರಿಗೂ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.
ಗ್ರಾಪಂ ಅಧ್ಯಕ್ಷ ಮಹಾಲಿಂಗಪ್ಪ ಸನದಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಬಿಎಲ್ ನಿರ್ದೇಶಕ ಬಾಲಚಂದ್ರ ಭಕ್ಷಿ, ಠಾಣಾಧಿಕಾರಿ ಜಿ.ಎಸ್.ಉಪ್ಪಾರ, ಕಂದಾಯ ಉಪನಿರೀಕ್ಷಕ ಬಸವರಾಜ ತಾಳಿಕೋಟಿ, ಗ್ರಾಮ ಲೆಕ್ಕಿಗ ಸಂತೋಷ ವೆಲಗಿಮ್, ಪಿಡಿಒ ಯಲ್ಲಪ್ಪ ಮಾಂಗ, ಅಕ್ಕ ಮಹಾದೇವಿ ಗ್ರಾಮಾಭಿವೃದ್ದಿ ಸೇವಾ ಸಂಘದ ಅಧ್ಯಕ್ಷೆ ಲವಿತಾ ಮಡಿವಾಳ, ರಾಜೇಶ್ವರಿ ನದಾಫ, ಗ್ರಾಪಂ ಸದಸ್ಯರಾದ ರಾಜು ಮುರಚಟ್ಟಿ, ಸದಾಶಿವ ರಜಪೂತ, ಬಿಬಿಜಾನ ಅಲಾದಿ, ರೇಖ ಹೊಸೂರ, ರಿಯಾನಾ ಅರಬ, ಅನಸೂಯಾ ಪಾಟೀಲ, ಲಕ್ಕವ್ವ ಆನೆಪ್ಪಗೋಳ ಹಾಗೂ ಇತರರು ಇದ್ದರು

About the author

Mallu Bolanavar