ಬ್ರೇಕಿಂಗ್ ನ್ಯೂಸ್

ಮಹಿಳೆಯೋರ್ವಳು ದುಡ್ಡಿನ ಆಸೆಗೆ ಬಾಲಕಿಯನ್ನು ಬಾವಿಗೆ ತಳ್ಳಿ ಹತ್ಯೆ

ಬೆಳಗಾವಿ : ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ಕೇವಲ ಇಪತ್ತು ರೂಪಾಯಿ ಆಸೆಗೆ ಬಾಲಕಿಯನ್ನು ಬಾವಿಗೆ ತಳ್ಳಿದ್ದಾಳೆ.
ಮೂಲತಃ ಮಹಾರಾಷ್ಟ್ರದ ವಾಸಿಂ ಜಿಲ್ಲೆಯ ಕಬ್ಬು ಕಟಾವು ತಂಡ ಏಳು ತಿಂಗಳ ಹಿಂದೆ ಜಾಗನೂರು ಗ್ರಾಮದಲ್ಲಿ ನೆಲೆಸಿದ್ದು, ಲಾಕ್ ಡೌನ್ ಜಾರಿಯಾದ ಕಾರಣ ಊರಿಗೆ ತೆರಳಲು ಸಾಧ್ಯವಾಗದೆ ಇಲ್ಲಿಯೇ ಉಳಿದುಕೊಂಡಿತ್ತು. ಜತೆಗೆ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಹಣದ ತೊಂದರೆಯನ್ನು ಎದುರಿಸುವಂತಾಗಿತ್ತು.
ಇದರ ಮಧ್ಯೆದಲ್ಲಿ ದಿವ್ಯಾ ಉಗಡೆ ಎಂಬ 4 ವರ್ಷದ ಬಾಲಕಿ ಕೈಗೆ ಪೋಷಕರು 20 ರೂಪಾಯಿ ನೋಟು ಕೊಟ್ಟು ಅಂಗಡಿಗೆ ಕಳುಹಿಸಿದ್ದಾರೆ.
ಈ ಸಂದರ್ಭದಲ್ಲಿ ಇದನ್ನು ನೋಡಿದ 25 ವರ್ಷದ ಪೂಜಾ ದತ್ತಾರಾವ್ ಕಾಂಬಳೆ ಎಂಬ ಯುವತಿ ಬಾಲಕಿಯನ್ನು ಗ್ರಾಮದ ಹೊರ ವಲಯಕ್ಕೆ ಕರೆದುಕೊಂಡು 20 ರೂಪಾಯಿ ಕಸೆದುಕೊಂಡು ಬಾವಿಗೆ ತಳ್ಳಿ ಹತ್ಯೆ ಮಾಡಿದ್ದಾಳೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About the author

Mallu Bolanavar