ಅನ್ನದಾತನ ಕೈ ತುತ್ತು ಕಸಿದ ಮಳೆ! ಅಕಾಲಿಕ ಮಳೆ ಕಂಗಾಲಾದ ರೈತ ;ನೆಲ ಕಚ್ಚಿದ ಮಾವು,ಪೇರಲ

ಅನ್ನದಾತನ ಕೈ ತುತ್ತು ಕಸಿದ ಮಳೆ! ಅಕಾಲಿಕ ಮಳೆ ಕಂಗಾಲಾದ ರೈತ ;ನೆಲ ಕಚ್ಚಿದ ಮಾವು,ಪೇರಲ

ಅಥಣಿ: ಅಥಣಿ ತಾಲ್ಲೂಕದ್ಯಾತ್ತ ಗುಡುಗು,ಮಿಂಚು ಸಹಿತ ಆಲೆಕಲ್ಲು ಮಳೆಯಿಂದ ರೈತ ಕಂಗಾಲಾಗುವತೆ ಮಾಡಿದೆ. ತಾಲೂಕಿನ ವಿವಿಧ ಕಡೆ ಮಳೆಯ ಆರ್ಭಟಕ್ಕೆ ರೈತನ ಬೆಳೆಗಳೆಲ್ಲವೂ ನೆಲಕಚ್ಚಿ ಹೋದರೆ ಇನ್ನೊಂದೆಡೆ ಮನೆಗಳ ಮೇಲ್ಛಾವಣಿಗಳು ಹಾರೀ ಹೋಗಿ ಜನರನ್ನು ನಿರಾಶ್ರಿತರನ್ನಾಗಿ ಮಾಡಿದೆ.
ಒಂದೆಡೆ ರೈತರಿಗೆ ಭಾರತ ಲಾಕ್ ಡೌನ ಸಂಕಷ್ಟ ತಂದು ಒಡ್ಡಿದರೆ, ಇನ್ನೊಂದೆಡೆ ಅಕಾಲಿಕ ಮಳೆಯಿಂದಾಗಿ ಅನ್ನದಾತನ ಕೈ ತುತ್ತು ಕಸಿದುಕೊಂಡಿದೆ.ಇದರಿoದ ತೀವ್ರ ಸಂಕಷ್ಟಕ್ಕೆ ಸಿಲುಕಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಾಳಿಗೇರಿ ವ್ಯಾಪ್ತಿಯಲ್ಲಿ ನಡೆದಿದೆ.ಕಳೆದ ನಲವತ್ತು ದಿನಗಳ ಕಾಲ ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲಾಗದೆ ಮತ್ತು ಮಾರಾಟ ಮಾಡಲಾಗದೆ ರೈತರು ಕಂಗಾಲಾಗಿದ್ದರೆ ಈಗ ಲಾಕ್ ಡೌನ್ ಸಡಿಲಗೊಂಡು ರೈತರು ನಿಟ್ಟುಸಿರು ಬಿಡುವ ಸಮಯದಲ್ಲಿ ಮಳೆರಾಯನ ಅಟ್ಟಹಾಸ ತೋರಿ ರೈತನ ಗಾಯದ ಮೇಲೆ ಬರೆ ಏಳೆದಿದ್ದಾನೆ.
ಸುಮಾರು ಹತ್ತು ಎಕರೆ ಜಮೀನಿನಲ್ಲಿ ಟ್ಯಾಂಕರ್ ನೀರು ಹರಿಸಿ ಮಾವು,ಪೇರಲ ಮತ್ತು ಮೆಣಸು ಬೆಳೆದಿದ್ದ ರೈತ ಸದ್ಯ ತೀವ್ರ ಸಂಕಷ್ಟಕ್ಕೆ ಈಡಾಗಿದ್ದಾರೆ. ಒಣ ಬೇಸಾಯವನ್ನೆ ಅವಲಂಬಿಸಿದ ಭೂಮಿಯಲ್ಲಿ ನೀರಿನ ಅಭಾವದ ನಡುವೆಯೂ ವಿನೂತನ ಪ್ರಯೋಗ ಮಾಡಿ ಕಷ್ಟ ಪಟ್ಟು ಬೆಳೆದಿದ್ದ ಬಂಪರ್ ಬೆಳೆ ಮಳೆರಾಯನ ಅಟ್ಟಹಾಸಕ್ಕೆ ಮಣ್ಣು ಪಾಲಾಗಿದೆ.
ಕಳೆದ ವರ್ಷ ಮಳೆ ಕೈ ಕೊಟ್ಟು ಬೆಳೆ ಹಾನಿ ಆಗಿದ್ದರೆ ಇನ್ನೊಂದು ಕಡೆ ಬೆಳೆಹಾನಿಯ ಪರಿಹಾರವೂ ಬರದೆ ರೈತರು ತೀವ್ರ ಸಂಕಷ್ಟಕ್ಕೆ ಈಡಾಗಿದ್ದು ನಿನ್ನೆ ಸುರಿದ ಅಕಾಲಿಕ ಮಳೆಯಿಂದಾಗಿ ಸಂಜೀವ ಅರವಿಂದ ಕುಲಕರ್ಣಿ ಎಂಬುವರಿಗೆ ಸೇರಿದ ನಾಲ್ಕು ವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಮಾವು,ಒಂದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಪೇರಲ ಮತ್ತು ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಣಸಿನ ಬೆಳೆ ಹಾನಿಯಾಗಿದೆ.
ಬಿರುಗಾಳಿಯೊಂದಿಗೆ ಸುರಿದ ಭಾರೀ ಮಳೆಯಿಂದ ಅಥಣಿ ತಾಲೂಕಿನ ಬಹುತೇಕ ಕಡೆ ಬೆಳೆ ಹಾನಿಯಾಗಿದ್ದು ರೈತರಿಗೆ ಕೊರೊನಾ ಸಂಕಷ್ಟದ ನಡುವೆ ಮಳೆಯ ಅಟ್ಟಹಾಸದಿಂದಾಗಿ ಹಳೆಯ ಗಾಯದ ಮೇಲೆ ಬರೆ ಎಳೆದಂತಾಗಿದೆ.ಸದ್ಯ ಮಳೆಯಿಂದ ಅಪಾರ ಪ್ರಮಾಣದ ಹಾನಿಯಾಗಿದ್ದು ಸಂಜೀವ ಕುಲಕರ್ಣಿ ಅವರ ಆರು ಲಕ್ಷ ಮೌಲ್ಯದ ಮಾವು,ಮೂರು ಲಕ್ಷ ಮೌಲ್ಯದ ಪೇರಲ ಮತ್ತು ಅಂದಾಜು ಹತ್ತು ಲಕ್ಷ ಮೌಲ್ಯದ ಮೆಣಸಿನ ಬೆಳೆ ಹಾನಿಯಿಂದಾಗಿ ಸದ್ಯ ಅಪಾರ ನಷ್ಟ ಉಂಟಾಗಿದ್ದು ಅಕಾಲಿಕ ಮಳೆಯಿಂದ ಹಾನಿ ಉಂಟಾದ ರೈತರ ಬೆಳೆಗಳಿಗೆ ಸರ್ಕಾರ ಕೂಡಲೇ ಬೆಳೆ ಪರಿಹಾರ ನೀಡಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಸಂಜೀವ ಕುಲಕರ್ಣಿ ಮನವಿ ಮಾಡಿದ್ದಾರೆ.
ಬಾಕ್ಸ್: ಕಳೆದ ಒಂದುವರೆ ತಿಂಗಳಿನಿoದ ಜಮೀನಿನಲ್ಲಿ ಬೆಳೆದ ಮತ್ತು ಕಟಾವಿಗೆ ಬಂದ ಹಣ್ಣು, ತರಕಾರಿ ಸೇರಿದಂತೆ ವಿವಿಧ ಬೆಳೆಗಳನ್ನು ಮಾರಾಟ ಮಾಡಲಾಗದೆ ಹೈರಾಣಾಗಿದ್ದೆವು.ನೀರಿನ ಸೌಲಭ್ಯ ಇಲ್ಲದ ವೇಳೆ ಟ್ಯಾಂಕರ್ ಮೂಲಕ ನೀರು ಉಣಿಸಿ ಬೆಳೆಸಿ ಜೋಪಾನ ಮಾಡಿದ್ದ ಬೆಳೆ ಹಾನಿ ಆಗಿದೆ ನಿನ್ನೆಯ ಗಾಳಿ ಮತ್ತು ಮಳೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತ ಸ್ಥಿತಿ ಉಂಟಾಗಿದೆ.ನನ್ನ ಜಮೀನಿನಲ್ಲಿ ಬೆಳೆದಿದ್ದ ಮಾವು,ಪೇರಲ,ಮತ್ತು ಮೆಣಸು ಹಾಳಾಗಿದ್ದು ಅಂದಾಜು ಇಪ್ಪತ್ತು ಲಕ್ಷದಷ್ಟು ಹಾನಿಯಾಗಿದೆ
Share
WhatsApp
Follow by Email