ಬ್ರೇಕಿಂಗ್ ನ್ಯೂಸ್

ತಂಗಿಯನ್ನು ಸಂರಕ್ಷಿಸಲು ಹೋಗಿ ಪ್ರಾಣ ಬಿಟ್ಟ ಅಕ್ಕ

ಬೆಳಗಾವಿ: ಚನ್ನಮ್ಮನ ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದಲ್ಲಿ ರವಿವಾರ ಬೆಳಿಗ್ಗೆ ವಿದ್ಯುತ್ ಸ್ಪರ್ಶದಿಂದ ತಂಗಿಯನ್ನು ರಕ್ಷಿಸಲು ಹೋಗಿ ಅಕ್ಕ ತನ್ನ ಪ್ರಾಣವನ್ನೆ ಬಿಟ್ಟ ಘಟನೆ ಜರುಗಿದೆ.
ಗುಂಡಪ್ಪ ಜಾಯ್ಕನವರ ತಮ್ಮ ನಿವಾಸದ ಮುಂದೆ ಹಾಕಿರುವ ತಗಡಿನ ಶೆಡ್‌ಗೆ ಸರ್ವಿಸ್ ವಿದ್ಯುತ್ ತಂತಿ ತಗುಲಿ ವಿದ್ಯುತ್ ಪ್ರಸರಣವಾದ ಪರಿಣಾಮ ಮೂರನೇ ಮಗಳಿಗೆ ವಿದ್ಯುತ್ ತಂತಿ ತಗುಲಿತ್ತು. ಆ ಸುದ್ದಿ ತಿಳಿದ ಮನೆಯ ಒಳಗೆ ಕುಳಿತಿದ್ದ ಎರಡನೇ ಮಗಳು ಸಂಜೋತಾ ಗುಂಡಪ್ಪ ಜಾಯ್ಕನವರ (೨೨) ತನ್ನ ತಂಗಿಗೆ ಶಾಕ್ ಸರ್ಕ್ಯೂಟ್‌ನಿಂದ ರಕ್ಷಿಸಲು ಹೋಗಿ ನಿಯಂತ್ರಣ ತಪ್ಪಿ ವಿದ್ಯುತ್ ತಂತಿ ಮೇಲೆ ಬಿದ್ದು ಸ್ಥಳದಲ್ಲಿ ಮೃತ ಪಟ್ಟಿದ್ದಾಳೆ. ತಂಗಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಮೃತ ಸಂಜೋತಾ ಕೆಪಿಎಸ್ ಹಾಗೂ ಪಿಎಸೈ ಪರೀಕ್ಷೆಯನ್ನು ಬರೆದಿದ್ದಳು.
ಈ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಕಿತ್ತೂರು ಪೊಲೀಸ್‌ರು ಹಾಗೂ ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದ್ದಾರೆ.

About the author

Mallu Bolanavar