ರಬಕವಿ-ಬನಹಟ್ಟಿಗೆ ಬಂದ ತಬ್ಲಿಘಿಗಳಿಗೆ ಕ್ವಾರಂಟೈನ್

ರಬಕವಿ-ಬನಹಟ್ಟಿಗೆ ಬಂದ ತಬ್ಲಿಘಿಗಳಿಗೆ ಕ್ವಾರಂಟೈನ್



ರಬಕವಿ-ಬನಹಟ್ಟಿ : ಗುಜರಾತಿನ ಅಹಮದಾಬಾದ್‌ನಿಂದ ಬನಹಟ್ಟಿಗೆ ಬಂದಿಳಿದ ೧೫ ತಬ್ಲಿಘಿಗಳ ಆರೋಗ್ಯ ಪರೀಕ್ಷಿಸಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲವೆಂದು ತಹಶೀಲ್ದಾರ ಪ್ರಶಾಂತ ಚನಗೊಂಡ ತಿಳಿಸಿದ್ದಾರೆ.
ಗುಜರಾತ ರಾಜ್ಯದ ಕಾಟಗೆವಾಡಿ ಮಸೀದಿ, ಅಹಮದಾಬಾದ್‌ನ ಸಿದ್ದಕಿ, ಆಸಿಯಾನಾ, ಮಹ್ಮದಿ, ಕೂಬಾ, ಕಾಂಜಾನ ಮಸೀದಿಯಲ್ಲಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಇಲ್ಲಿನ ೧೫ ಜನ ಹೋಗಿದ್ದರು. ಲಾಕಡೌನ್ ಜಾರಿಯಾದ ಕಾರಣದಿಂದಾಗಿ ತಾಲೂಕಿಗೆ ಹಿಂದಿರುಗಲು ಸಾಧ್ಯವಾಗಿರಲಿಲ್ಲವೆಂದರು.
ಲಾಕಡೌನ್ ಸಡಿಲಿಕೆ ಕಾರಣದಿಂದಾಗಿ ಅಲ್ಲಿನ ಜಿಲ್ಲಾಡಳಿತದಿಂದ ಅನುಮತಿ ಪಡೆದು, ಬನಹಟ್ಟಿಗೆ ಮರಳಿದ್ದಾರೆ. ಇವರು ಅಂತಾರಾಜ್ಯ ಪ್ರಯಾಣಕ್ಕೆ ಇರುವ ನಿಯಮಗಳನುಸಾರ ಅನುಮತಿ ಪಡೆಯದ ಕಾರಣ ಅಹಮದಾಬಾದ್‌ನಿಂದ ಕೊಲ್ಲಾಪೂರ, ಸಾಂಗಲಿ ಮಾರ್ಗವಾಗಿ ಚಿಕ್ಕೋಡಿಯಲ್ಲಿ ನಾಲ್ಕು ದಿನ ಅನುಮತಿವರೆಗೂ ಕ್ವಾರಂಟೈನ್ ಮಾಡಲಾಗಿತ್ತು. ಅನುಮತಿ ನಂತರ ಬನಹಟ್ಟಿಗೆ ಪ್ರವೇಶವಾಗಿದ್ದಾರೆ ಎಂದು ತಹಶೀಲ್ದಾರ ಸ್ಪಷ್ಟನೆ ನೀಡಿದರು.
ಅಹಮದಾಬಾದ್‌ನಿಂದ ಪಾಸ್ ನೀಡಲಾಗಿತ್ತು. ಪಾಸ್ ನೀಡುವ ಮೊದಲು ಅಲ್ಲಿಯೇ ಎಲ್ಲರಿಗೂ ಆರೋಗ್ಯ ತಪಾಸಣೆ ಮಾಡಲಾಗಿದೆ. ಶುಕ್ರವಾರ ಬೆಳಗಿನ ಜಾವ ೪.೦೦ ರ ಸುಮಾರಿಗೆ ಚೆಕ್‌ಪೋಸ್ಟ್ಗೆ ಆಗಮಿಸಿದ್ದ ಇವರನ್ನು ಮತ್ತೊಮ್ಮೆ ಆರೋಗ್ಯ ತಪಾಸಣೆ ನಡೆಸಿ ಗಂಟಲು ದ್ರವ ಸಂಗ್ರಹಿಸಿ ಈಗಾಗಲೇ ಪರೀಕ್ಷೆಗೆ ಕಳುಹಿಸಲಾಗಿದೆ ಎಂದರು.
ಬನಹಟ್ಟಿ ವೃತ್ತ ನಿರೀಕ್ಷಕ ರವಿಕುಮಾರ ಧರ್ಮಟ್ಟಿ ನೇತೃತ್ವದಲ್ಲಿ ಕ್ವಾರಂಟೈನ್ ಸುತ್ತ ಭದ್ರತೆ ಒದಗಿಸಲಾಗಿದೆ. ಪಟ್ಟಣದ ಜನತೆ ಸುತ್ತಮುತ್ತ ಸಂಚಾರಿಸಬಾರದೆAದು ತಿಳಿಸಿದ್ದಾರೆ
Share
WhatsApp
Follow by Email