
ರಾಜ್ಯಾದ್ಯಂತ ಸಮಗಾರ, ಚಮ್ಮಾರ, ಡೋರ, ಚಲವಾದಿ, ಮಾದಿಗ ಸಮಾಜ ಸೇರಿದಂತೆ ಇತರೆ ಹಿಂದುಳಿದ ಕುಶಲಕರ್ಮಿಗಳು ಬಿಸಿಲು ಮಳೆ ಲೆಕ್ಕಿಸದೇ ರಸ್ತೆ ಬದಿ ಕುಳಿತು ಚರ್ಮ ಹದ ಮಾಡುವ, ಸತ್ತ ದನಗಳ ಚರ್ಮ ಸುಲಿಯುವ ಹಾಗೂ ಚಪ್ಪಲಿ ತಯಾರಿಸಿ ಜೀವನ ನಡೆಸುತ್ತಿದ್ದಾರೆ. ಚಪ್ಪಲಿ ಉದ್ಯೋಗದಲ್ಲಿ ತೊಡಗಿ ಸಾರ್ವಜನಿಕರ ಸೇವೆಯಲ್ಲಿದ್ದ ನಮಗೂ ನಮ್ಮ ಸಮಾಜಕ್ಕೂ ನೆರವು ನೀಡಬೇಕೆಂದು ಲಿಖಿತ ಮೂಲಕ ಸಲ್ಲಿಸಲಾಯಿತು.
ಈ ವೇಳೆ ಹರಳಯ್ಯ ಸಮಾಜದ ಅಧ್ಯಕ್ಷ ಅಣ್ಣಪ್ಪ ಹೊಂಗಲ, ಮಹೇಶ ಬೇಲೀಫ, ಸುಧಾಕರ ಕೌಜಲಗಿ, ಕುಮಾರ ರಾಮದುರ್ಗ, ಡಿಎಸ್ಎಸ್ ಮುಖ್ಯಸ್ಥರಾದ ರವಿ ದೊಡಮನಿ, ಯಲ್ಲಮ್ಮ ಗೊರವನಕೊಳ್ಳ, ಯಲ್ಲಮ್ಮ ಕಾಳಪ್ಪನವರ ಹಾಗೂ ಪ್ರಮುಖರು ಇದ್ದರು