ಬ್ರೇಕಿಂಗ್ ನ್ಯೂಸ್

ಕೃಷಿಕೂಲಿಕಾರರ ಸಂಕಷ್ಟಕ್ಕೆ ಸ್ಪಂದಿಸಲು ಸಿಎಮ್‌ಗೆ ಮನವಿ

ಸವದತ್ತಿ : ಸರಕಾರ 1610 ಕೋಟಿ ನೆರವು ನೀಡಿ ಎಲ್ಲ ವರ್ಗದ ಶ್ರಮಿಕರÀ ಸಂಕಷ್ಟಕ್ಕೆ ತಾತ್ಕಾಲಿಕವಾಗಿ ಸ್ಪಂಧಿಸಿದ ನಡೆ ಸ್ವಾಗತಾರ್ಹ. ಕೃಷಿ ಕೂಲಿಕಾರರನ್ನು ನಿರ್ಲಕ್ಷಿಸಿದ್ದು ವಿಷಾದನೀಯ. ಶೀಘ್ರವೇ ಕೃಷಿಕೂಲಿಕಾರರನ್ನು ಪರಿಗಣಿಸಿ ಅವರಿಗೂ ಸಹ ಪರಿಹಾರ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ್ಯ ಕೃಷಿಕೂಲಿಕಾರರ ಸಂಘ ತಾಲೂಕಾ ಘಟಕದಿಂದ ತಹಶೀಲ್ದಾರ ಕಚೇರಿಯಲ್ಲಿ ತಹಶೀಲ್ದಾರ ಮೂಲಕ ಸಿಎಮ್‌ಗೆ ಮನವಿ ಸಲ್ಲಿಸಲಾಯಿತು.
ಸಧ್ಯಕ್ಕೆ ಕೃಷಿಕೂಲಿಗಾರರಿಗೆ ಮೊದಲಿನಂತೆ ಕೆಲಸಗಳು ಸಿಗುತ್ತಿಲ್ಲ. ಅದರಂತೆ ಉದ್ಯೋಗ-ಖಾತ್ರಿಯಲ್ಲಿ ಕುಟುಂಬದ ಒಬ್ಬರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಕೇವಲ ಒಬ್ಬನ ದುಡಿಮೆಯಲ್ಲಿ ಕುಟುಂಬ ಸಾಗಿಸುವಂತಾಗಿದೆ. ಇದು ಕುಟುಂಬವನ್ನು ತೀವ್ರ ಸಂಕಷ್ಟದ ಪರಿಸ್ಥಿತಿಗೆ ದೂಡಿದೆ.
ಸರಕಾರಕ್ಕೆ ಈ ಮೊದಲು ತಾತ್ಕಾಲಿಕವಾಗಿ 5 ಸಾವಿರ ಪರಿಹಾರ ಧನ ನೀಡಬೇಕೆಂದು ಮನವಿ ಮಾಡಿದರೂ ಸಹ 1610 ಕೋಟಿ ಪ್ಯಾಕೆಜ್ ನೆರವಿನಲ್ಲಿ ಕೃಷಿಕೂಲಿಕಾರರನ್ನು ಕೈಬಿಟ್ಟು ತಾರತಮ್ಯ ಮಾಡುತ್ತಿದೆ. ರಾಜ್ಯ ಸರ್ಕಾರ ಇದುವರೆಗೂ ಕೇರಳ ಮಾದರಿಯಂತೆ ಕೃಷಿ ಕೂಲಿಕಾರರಿಗಾಗಿ ಕಲ್ಯಾಣ ಕಾಯಿದೆಯಾಗಲಿ, ಕಲ್ಯಾಣ ಮಂಡಳಿಯ ರಚನೆಗೆ ಮುಂದಾಗಿಲ್ಲ. ಅದಲ್ಲದೇ ವಾರ್ಷಿಕವಾಗಿ ಘೋಷಿಸುವ ರಾಜ್ಯ ಬಜೆಟ್‌ನಲ್ಲಿಯೂ ಸಹ ಅವರನ್ನು ನಿರ್ಲಕ್ಷಿಸುತ್ತ ಬಂದಿವೆ. ಕೂಡಲೇ ಸರಕಾರ ನಮ್ಮ ಬಡ ಕೃಷಿ ಕೂಲಿಕಾರರ ನೆರವಿಗೆ ಧಾವಿಸಿ 5 ಸಾವಿರ ಪರಿಹಾರ ನೀಡಿ, ಕೃಷಿಯ ಕೂಲಿಕಾರರನ್ನು ಸಂಕಷ್ಟದಿAದ ಪಾರು ಮಾಡಬೇಕೆಂದು ಮನವಿ ಸಲ್ಲಿಸಿದರು.
ಈ ವೇಳೆ ಅಧ್ಯಕ್ಷ ಶ್ರೀಕಾಂತ ಹಟ್ಟಿಹೊಳಿ, ಕಾರ್ಯದರ್ಶಿ ಎಲ್.ಎಸ್.ನಾಯಕ, ಫಕ್ರುಸಾಬ ನದಾಪ್ ಇದ್ದರು.

About the author

Mallu Bolanavar