ಬ್ರೇಕಿಂಗ್ ನ್ಯೂಸ್

ರಬಕವಿ-ಬನಹಟ್ಟಿ : ಮಾಸ್ಕ ಧರಿಸದಿದ್ದರೆ ದಂಡ ಖಚಿತ.

ರಬಕವಿ-ಬನಹಟ್ಟಿ : ಕೋರೊನಾ ವೈರಸ್‌ದಿಂದ ಲಾಕಡೌನ್‌ವಿರುವುದಿಂದ ವಿನಾಕಾರಣ ರಬಕವಿ-ಬನಹಟ್ಟಿ ನಗರಸಭೆಯ ವ್ಯಾಪ್ತಿಯಲ್ಲಿ ಮಾಸ್ಕ ಧರಿಸದೇ ಸಂಚರಿಸಿದರೇ ದಂಡ ಬೀಳುವುದು ಗ್ಯಾರಂಟಿ. ಸರಕಾರದ ಆದೇಶದಂತೆ ನಗರಸಭೆ ವ್ಯಾಪ್ತಿಯಲ್ಲಿ ಮಾಸ್ಕ ಧರಿಸದೇ ಸಂಚರಿಸಿದರೆ, ಗುಟ್ಕಾ ಹಾಗೂ ತಂಬಾಕು ಪದಾರ್ಥಗಳು ಮಾರಾಟ ಮಾಡಿದರೆ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ಹಾಗೂ ಕೋವಿಡ್ ೧೯ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ೧೦೦ ರೂ. ದಂಡವನ್ನು ನಗರಸಭೆಯವರು ವಿಧಿಸುತ್ತಿದ್ದಾರೆ.
ಇಲ್ಲಿಯ ವರೆಗೆ ರಬಕವಿ-ಬನಹಟ್ಟಿ ನಗರಸಭೆಯ ವ್ಯಾಪ್ತಿಯ ನಾಲ್ಕು ನಗರಗಳಿಂದ ಸುಮಾರು ರೂ. ೨೦ ಸಾವಿರಕ್ಕೂ ಅಧಿಕ ದಂಡ ದಂಡ ವಸೂಲಿಯಾಗಿದೆ. ನಗರಸಭೆಯ ಪೌರಾಯುಕ್ತ ಶ್ರೀನಿವಾಸ ಜಾಧವ ನೇತೃತ್ವದಲ್ಲಿ ಹಿರಿಯ ಆರೋಗ್ಯ ನಿರಿಕ್ಷಕ ಮಹಾಲಿಂಗಪ್ಪ ಮುಗಳೋಡ, ಕಿರಿಯ ನಿರಿಕ್ಷಕ ರಾಜಕುಮಾರ ಹೊಸೂರ, ಇರಫಾನ ಝಾರೆ, ಸಂಗೀತಾ ಕೋಳಿ ಹಾಗೂ ನಗರಸಭೆಯ ಸಿಬ್ಬಂದಿಯವರು ದಂಡ ವಸೂಲಿ ಮಾಡುತ್ತಿದ್ದಾರೆ

About the author

Mallu Bolanavar