ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಕಳ್ಳಭಟ್ಟಿಸಾರಾಯಿ ವಶಪಡಿಸಿಕೊಂಡಿರುವ ಚಿಕ್ಕೋಡಿ ಅಬಕಾರಿ ಪೊಲೀಸ್‍ರು.

ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಕಳ್ಳಭಟ್ಟಿಸಾರಾಯಿ ವಶಪಡಿಸಿಕೊಂಡಿರುವ ಚಿಕ್ಕೋಡಿ ಅಬಕಾರಿ ಪೊಲೀಸ್‍ರು.

ಚಿಕ್ಕೋಡಿ: ಸಮೀಪದ   ಹುಕ್ಕೇರಿ ವಲಯ ವ್ಯಾಪ್ತಿಯಲ್ಲಿ ಶಹಾಬಂದರ್ ಕ್ರಾಸ್ ನಲ್ಲಿ ಅಬಕಾರಿ ದಾಳಿ ಮತ್ತು ರಸ್ತೆಗಾವಲು ಮಾಡಿ ಅಕ್ರಮವಾಗಿ ಅಂದಾಜು 330 ಲೀಟರ್ ಕಳ್ಳಭಟ್ಟಿ ಸಾರಾಯಿ ಸಾಗಾಟದ ಆರೋಪದ ಮೇಲೆ 2 ಘೋರ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಬೆಳಗಾವಿ ಅಬಕಾರಿ ಜಂಟಿ ಆಯುಕ್ತ ಡಾ,ವೈ.ಮಂಜುನಾಥ, ಉಪಾಯುಕ್ತ ಬಸವರಾಜ ಸಂದಿಗವಾಡ ಮಾರ್ಗದರ್ಶನದಲ್ಲಿ ಡಿವೈಎಸ್‍ಪಿ ವಿಜಯಕುಮಾರ ಹಿರೇಮಠ, ಸಿಪಿಐ ಬಸವರಾಜ ಕರಮ್ಮನ್ನವರ ಹುಕ್ಕೇರಿ ವಲಯ ವ್ಯಾಪ್ತಿಯ ಶಹಬಂದರ್ ಕ್ರಾಸ್ ಹತ್ತಿರ ರಾತ್ರಿ 3.30ಕ್ಕೆ ದಾಳಿ ನಡೆಸಿ ಮೂವರು ಎರಡು ಬೈಕ್ ಮೇಲೆ 11 ರಬ್ಬರ ಟೂಬ್‍ಗಳಲ್ಲಿ ತಲಾ 30 ಲೀಟರ ಕಳ್ಳಭಟ್ಟಿ ಸಾರಾಯಿ ತೆಗೆದುಕೊಂಡು ಹೋಗುವ ಖಚಿತ ಮಾಹಿತಿ ಮೇರಿಗೆ ದಾಳಿ ನಡೆಸಿ ಅವರಿಂದ 66 ಸಾವಿರ ಮೌಲ್ಯದ ಕಳ್ಳಭಟ್ಟಿ ಹಾಗು ಎರಡು ಬೈಕ್ ಸೇರಿ ಒಟ್ಟು 1.26 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಅಬಕಾರಿ ಸಿಪಿಐ ಬಸವರಾಜ ಕರಮ್ಮನ್ನವರ ತಿಳಿಸಿದರು.
ಚಿಕ್ಕೋಡಿ ಅಬಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share
WhatsApp
Follow by Email