ಬ್ರೇಕಿಂಗ್ ನ್ಯೂಸ್

ಕುಂದಾನಗರಿಯಲ್ಲಿ ರವಿವಾರ ಕಿಲ್ಲರ್ ಕೊರೊನಾ ರಜೆ..

ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಯಮರಾಜ ಭಾನುವಾರ ರಜೆ ಹಾಕಿದ್ದಾನೆ. ಇಂದು ಕುಂದಾನಗರಿಯಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿಲ್ಲ. ಇದರಿಂದ ಜನ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.
ಹೌದು ರವಿವಾರ 12 ಗಂಟೆಯ ರಾಜ್ಯ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು. ರಾಜ್ಯದಲ್ಲಿ ಇಂದು ಹೊಸದಾಗಿ ಐದು ಕೊರೊನಾ ಪಾಸಿಟಿವ್ ಕೇಸ್‍ಗಳು ದೃಢಪಟ್ಟಿವೆ. ಕಲಬುರ್ಗಿಯಲ್ಲಿ ಮೂರು ಹಾಗೂ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಎರಡು ಕೊರೊನಾ ಸೋಂಕು ಕಾಣಿಸಿಕೊಂಡಿದ್ದು.

About the author

Mallu Bolanavar