ಬ್ರೇಕಿಂಗ್ ನ್ಯೂಸ್

ದೇಶದಲ್ಲಿ ಮತ್ತೆ ಎರಡು ವಾರಗಳ ಕಾಲ ಲಾಕ್ ಡಾನ್ ವಿಸ್ತರಣೆ

ನವದಿಲ್ಲಿ: ದೇಶದಲ್ಲಿ ಮತ್ತೆ ಎರಡು ವಾರಗಳ ಕಾಲ ಲಾಕ್ ಡಾನ್ ವಿಸ್ತರಣೆಯಾಗಿದೆ.  ಕೇಂದ್ರ ಸಚಿವಾಲಯದಿಂದ ಈಗ ಆದೇಶ ಹೊರಬಿದ್ದಿದೆ.
ಮೇ 4 ರಿಂದ ಮೇ 17 ರವರೆಗೆ  ದಿನ ಲಾಕ್ ಡೌನ್ ವಿಸ್ತರಣೆಯಾಗಿದೆ.
ಮೂರು ವಲಯಗಳಾಗಿ ವಿಂಗಡಿಸಿ ಲಾಕ್ ಡೌನ್ ವನ್ನು ವಿಸ್ತರಣೆ ಮಾಡಲಾಗಿದೆ. 
ರೆಡ್ ಝೋನ್ ಗಳಲ್ಲಿ ಲಾಕ್ ಡೌನ್ ಮುಂದುವರಿಯಲಿದೆ. ಗ್ರೀನ್ ,ಆರೆಂಜ್ ಜೋನಗಳಲ್ಲಿ ವಿನಾಯಿತಿ ದೊರೆಯಲಿದೆ.
ಕರ್ನಾಟಕದ  ರೆಡ್ ಝೋನ್ ಗಳಾದ  ಬೆಂಗಳೂರು, ಮೈಸೂರು ಜೊತೆಗೆ ಕಲಬುರಗಿ, ಬೆಳಗಾವಿ ಗಳಲ್ಲಿ ಯಥಾಸ್ಥಿತಿ ಮುಂದುವರಿಯುವ ಬಗ್ಗೆ ಚಿಂತನೆ ನಡೆದಿದೆ.
ಮೇ ೧೭ ರವರೆಗೆ ರೈಲು ಬಸ್ಸು ಸಂಚಾರ ಸ್ಥಗಿತವಾಗಿದೆ. ಯಾವ ವಲಯದಲ್ಲಿಯೂ ಶಾಲೆ ಕಾಲೇಜುಗಳು ಮೆಟ್ರೊ ಇರುವುದಿಲ್ಲ. 

About the author

Mallu Bolanavar