ಬ್ರೇಕಿಂಗ್ ನ್ಯೂಸ್

BIG BREAKING: ಹಿರೇಬಾಗೇವಾಡಿ 10 ಸೇರಿ ಬೆಳಗಾವಿಯಲ್ಲಿ ಇಂದು 14 ಪಾಸಿಟಿವ್

ಬೆಳಗಾವಿ : ಜಿಲ್ಲೆಗೆ ಇದು ದೊಡ್ಡ ಶಾಕ್. ಇಂದು ಬಿಡುಗಡೆಯಾಗಿರುವ ಹೆಲ್ತ್ ಬುಲಿಟಿನ್ ನಲ್ಲಿ ಹಿರೇಬಾಗೇವಾಡಿಯ 10 ಜನರು ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟೂ 14 ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ.
ಇದರಿಂದಾಗಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 69ಕ್ಕೇರಿದೆ.
ಸಂಕೇಶ್ವರದ 8 ವರ್ಷದ ಬಾಲಕಿ, 9 ವರ್ಷದ ಬಾಲಕ ಹಾಗೂ 75 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಬೆಳಗಾವಿಯಲ್ಲಿ 27 ವರ್ಷದ ಪುರುಷನಿಗೆ ಸೋಂಕು ತಗುಲಿದೆ.
ಹಿರೇಬಾಗೇವಾಡಿಯ 27, 24, 48, 24 ವರ್ಷದ ಮಹಿಳೆಯರಿಗೆ, 36, 43, 36, 50 ವರ್ಷದ ಪುರುಷರಿಗೆ ಸೋಂಕು ಪತ್ತೆಯಾಗಿದೆ. ಹಿರೇಬಾಗೆವಾಡಿಯ 16 ವರ್ಷದ ಬಾಲಕಿ ಹಾಗೂ 18 ವರ್ಷದ ಬಾಲಕನಿಗೂ ಸೋಂಕು ತಗುಲಿದೆ.
ಹಿರೇಬಾಗೇವಾಡಿಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಿದ್ದು, 35ಕ್ಕೇರಿದೆ.
ವಿಪರ್ಯಾಸವೆಂದರೆ ಸಂಕೇಶ್ವರದ ಮೂವರು ತಬ್ಲಿಘಿಗಳಲ್ಲ. ಇಲ್ಲಿನ ಇಬ್ಬರು ಮಕ್ಕಳಿಗೆ ಸೋಂಕು ತಗುಲಿರುವುದು ಆಶ್ಚರ್ಯಕರವಾಗಿದೆ.

About the author

Mallu Bolanavar