ಬ್ರೇಕಿಂಗ್ ನ್ಯೂಸ್

ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಅರಿಶಿನ-ಕುಂಕುಮ ಹಂಚಿ ಆರತಿ ಬೆಳಗಿ ಉಡಿ ತುಂಬುವುದರ ಜೊತೆಗೆ ಆಹಾರ ಕಿಟ್ ಹಾಗೂ ಕ್ಯಾಪ್ ಗಳನ್ನು ವಿತರಣೆ

ಮೂಡಲಗಿ : ತಾಲೂಕಿನ ಧರ್ಮಟ್ಟಿ ಗ್ರಾಮದಲ್ಲಿ ಇಂದು ಕೊರಣ ವೈರಸ್ ಸಲವಾಗಿ ಹಗಲಿರುಳು ಎನ್ನದೆ ಶ್ರಮಿಸುತ್ತಿರುವ ಶ್ರಮಜೀವಿಗಳಾದ ಆಶಾ ಕಾರ್ಯಕರ್ತೆಯರು, ಅಂಗನವಾಡಿಯ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿಗಳಿಗೆ ಹಾಗೂ ಪೋಸ್ಟ್ ಮ್ಯಾನ್ ಮತ್ತು ಗ್ರಾಮ ಪಂಚಾಯತಿಯ ಸಿಬ್ಬಂದಿಯವರಿಗೆ. ಧರ್ಮಟ್ಟಿ ಗ್ರಾಮದ ದಿವಂಗತ ಉದ್ದಪ್ಪ ದುಂಡಪ್ಪ ಹಳ್ಳೂರ ಮತ್ತು ಲಕ್ಷ್ಮಣ್ ದುಂಡಪ್ಪ ಹಳ್ಳೂರ ಇವರ ಸ್ಮರಣಾರ್ಥ ಹಳ್ಳೂರ ಸಹೋದರರಿಂದ ಆಶಾ ಕಾರ್ಯಕರ್ತೆಯರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಅರಿಶಿನ-ಕುಂಕುಮ ಹಂಚಿ ಆರತಿ ಬೆಳಗಿ ಉಡಿ ತುಂಬುವುದರ ಜೊತೆಗೆ ಆಹಾರ ಕಿಟ್ ಹಾಗೂ ಕ್ಯಾಪ್ ಗಳನ್ನು ವಿತರಿಸಲಾಯಿತು.

About the author

Mallu Bolanavar