ಬ್ರೇಕಿಂಗ್ ನ್ಯೂಸ್

ಕಮಾಂಡೋ ಬಿಡುಗಡೆ; ನೇರವಾಗಿ ಸಿ.ಆರ್.ಪಿ.ಎಫ್ ಕ್ಯಾಂಪಿಗೆ ರವಾನೆ

ಬೆಳಗಾವಿ: ಸಿ.ಆರ್.ಪಿ.ಎಫ್ ಕೋಬ್ರಾ ವಿಂಗ್ ನ ಕಮಾಂಡೋ ಸಚಿನ ಸಾವಂತ ಇಂದು ಸಂಜೆ ಹಿಂಡಲಗಾ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದು, ಆತನನ್ನು ನೇರವಾಗಿ ಜೈಲಿನಿಂದ ತೋರಾಳಿಯಲ್ಲಿರುವ ಕೋಬ್ರಾ ಟ್ರೇನಿಂಗ್ ಸೆಂಟರ್ ಗೆ ಕರೆದುಕೊಂಡು ಹೋಗಲಾಗಿದೆ.
ಸಿ.ಆರ್.ಪಿ.ಎಫ್ ನ ಡೆಪ್ಯುಟಿ ಕಮಾಂಡೆಂಟ್ ರಘುನಾಥ ಉಪಾಧ್ಯೆ ಸೇರಿದಂತೆ ಕೆಲವು ಅಧಿಕಾರಿಗಳು ಸಚಿನ ಸಾವಂತನನ್ನು ಬಿಡುಗಡೆ ಮಾಡಿಕೊಂಡು ಕರೆದೊಯ್ಯಲು ಹಿಂಡಲಗಾ ಜೈಲಿಗೆ ಬಂದಿದ್ದರು. ಇದೇ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದಿನ ಕ್ರಮಗಳನ್ನು ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಸಿ.ಆರ್.ಪಿ.ಎಫ್ ಇದನ್ನು ಒಂದು ವಿಶೇಷ ಪ್ರಕರಣವೆಂದು ಪರಿಗಣಿಸಿದೆ. 24 ಗಂಟೆಗೂ ಹೆಚ್ಚು ಕಾಲ ಜೈಲಿನಲ್ಲಿದ್ದ ಕಾರಣ, ಕಮಾಂಡೋ ಸಚಿನ ಸಾವಂತ ಕಾನೂನಿನ ಪ್ರಕಾರ ಸೇವೆಯಿಂದ ಅಮಾನತುಗೊಂಡಿದ್ದರೂ, ಅಧಿಕಾರಿಗಳೇ ಮುಂದಾಗಿ ಆತನನ್ನು ಜೈಲಿನಿಂದ ಬಿಡುಗಡೆ ಮಾಡಿಸಿಕೊಂಡು, ಮತ್ತೆ ಸೇವೆಗೆ ಸೇರಿಸಿಕೊಂಡಿದ್ದಾರೆ. ಕಳೆದೆರಡು ದಿನಗಳಿಂದ ಕಮಾಂಡೋನನ್ನು ಜಾಮೀನಿನ ಬಿಡುಗಡೆ ಮಾಡಲು ಅಧಿಕಾರಿಗಳು ಎಲ್ಲ ಪ್ರಯತ್ನವನ್ನು ಮಾಡುತ್ತಿದ್ದರು.

About the author

Mallu Bolanavar