ಚಿಕ್ಕೋಡಿಯಲ್ಲಿ ಸರಳವಾಗಿ ಬಸವ ಜಯಂತಿ

ಚಿಕ್ಕೋಡಿಯಲ್ಲಿ ಸರಳವಾಗಿ ಬಸವ ಜಯಂತಿಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ  ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ  ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಚಿಕ್ಕೋಡಿ  ಬಸವ ಸಕ೯ಲನಲ್ಲಿ  ಬಸವ ಜಯಂತಿ ಅಂಗವಾಗಿ ವಿಶ್ವದ ಮೊದಲ ಪ್ರಜಾಪ್ರಭುತ್ವ ದ ಜನಕ, ಮಹಾ ಮಾನವತಾವಾದಿ , ಸಮಾನತೆಯ ಸಂದೇಶ ಸಾರಿದ ಶ್ರೀ ಬಸವೇಶ್ವರ ಜಯಂತಿ ಅಂಗವಾಗಿ ಬಸವಣ್ಣನವರ ಮೂರ್ತಿ ಗೆ ಮಾಲಾರ್ಪಣೆ ಮಾಡಿ, ಗೌರವ  ಸಲ್ಲಿಸಿದರು.
ಈ ಸಂದರ್ಭದಲ್ಲಿ  ಜಗದೀಶ ಕವಟಗಿಮಠ,ಉಪವಿಭಾಗದಿಕಾರಿ ರವೀಂದ್ರ ಕರಲಿಂಗನ್ನವರ, ತಹಶೀಲ್ದಾರ ಸುಭಾಷ ಸಂಪಗಾವಿ,ಪೌರಾಯುಕ್ತರಾದ ಸುಂದರ ರೋಗಿ, ಹಾಗೂ ಪುರಸಭೆ ಸದಸ್ಯರು, ಗಣ್ಯರು ಉಪಸ್ಥಿತರಿದ್ದರು.
Share
WhatsApp
Follow by Email