
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಇಂದು ದೃಢಪಟ್ಟಂತ ಬೆಳಗಿನ 15 ಹೊಸ ಕೊರೋನಾ ಸೋಂಕಿತ ಪ್ರಕರಣದಲ್ಲಿ ರಾಜ್ಯದ ಓರ್ವ ಪತ್ರಕರ್ತನಿಗೂ ಕೂಡ ಕೊರೋನಾ ಸೋಂಕು ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ ಎಂಬುದಾಗಿ ತಿಳಿಸಿದ್ದರು. ಅಲ್ಲದೇ ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ್ದಂತ ಹೆಲ್ತ್ ಬುಲೆಟಿನ್ ನಲ್ಲೂ ಸ್ಪಷ್ಟವಾಗಿತ್ತು.
ಈ ಹಿನ್ನಲೆಯಲ್ಲಿ ಸೋಂಕಿತ ಪತ್ರಕರ್ತನ ಸಂಪರ್ಕದಲ್ಲಿದ್ದಂತ ರಾಜ್ಯದ ಸುದ್ದಿ ಮಾಧ್ಯಮದ ಪತ್ರಕರ್ತರು ಆತಂಕಕ್ಕೆ ಒಳಗಾಗಿದ್ದಾರೆ.