ರೋಗನಿರೋಧಕ ಶಕ್ತಿ ವೃದ್ದಿಗೆ ನಾಟಿ ವೈದ್ಯರಿಂದ ಹಲವು ಗಿಡಮೂಲಿಕೆ, ಆಯುರ್ವೇದ, ವನಸ್ಪತಿಯ ಉಚಿತ ಮಾಹಿತಿ.

ವರದಿ: ಪ್ರೊ. ಸಂಗಮೇಶ ಅ. ಹಿರೇಮಠ.
ಮುಗಳಖೋಡ: ಜಾತಿ, ಮತ, ಪಂಥ, ಸ್ವದೇಶಿ-ವಿದೇಶಿ ಎಂಬ ತಾರತಮ್ಯವಿಲ್ಲದೇ ದೇಶದಲ್ಲಿ ವೇಗವಾಗಿ ಹರಡುತ್ತಿರುವ ಕರೋನ ವೈರಸ್‌ನ್ನು ಮಾನವ ಧರ್ಮದಿಂದ ಕಟ್ಟಿಹಾಕಬೇಕಿದೆ.
ಕರೋನಾ ವೈರಸ ಸೊಂಕಿನಿAದಾಗಿ ಜನರಲ್ಲಿ ಆತಂಕ ಮೂಡಿದ್ದು, ಸ್ವಲ್ಪ ಜ್ವರ, ಕೆಮ್ಮು, ನೆಗಡಿಯಂತಹ ಲಕ್ಷಣಗಳು ಕಂಡುಬAದ ತಕ್ಷಣ ವೈದ್ಯರನ್ನು ಸಂಪರ್ಕಿಸಲು ಸರ್ಕಾರ ಆದೇಶಿಸಿದೆ, ಕರೋನ ರೋಗ ತಡೆಗಟ್ಟುವುದಷ್ಟೇ ಅಲ್ಲದೇ, ರೋಗದ ಬಗ್ಗೆ ಜಾಗೃತಿಯನ್ನು ಮೂಡಿಸುವುದರ ಜೊತೆಗೆ ರೋಗ ನಿರೋದಕ ಶಕ್ತಿ ಹೆಚ್ಚಿಸುವುದು ನಮ್ಮ ಕರ್ತವ್ಯವಾಗಿದೆ.
ರೋಗ ನಿರೋಧÀಕ ಶಕ್ತಿ ಹೆಚ್ಚಿಸಿದರೆ ಧೀರ್ಘಾಯುಷಿಯಾಗಿ ಬಾಳಬಹುದು:
ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದರ ಜೊತೆಗೆ ರೋಗನಿರೋದಕ ಶಕ್ತಿ ಹೆಚ್ಚಿಸುವುದರಿಂದ ಕರೋನ ವೈರಸ ಬಾರದಂತ್ತೆ ತಡೆಯಬಹುದು. ಹೌದು ನಮ್ಮ ಶರೀರದಲ್ಲಿ ಅಸ್ತಮಾ, ಕೆಮ್ಮು, ಧಮ್ಮು, ಹೃದಯರೋಗ ಇರುವವರಿಗೆ, ಚಿಕ್ಕ ಮಕ್ಕಳಿಗೆ, ವಯೋವೃದ್ದರಿಗೆ ಕರೋನ ಬೇಗನೆ ಅಂಟಿಕೊಳ್ಳುತ್ತದೆ ಎಂದು ನೊಡುತ್ತಿದ್ದೆವೆ. ಈ ಕಾರಣದಿಂದಾಗಿ ನಾವು ಮೊದಲು ಅಸ್ತಮಾ, ಕೆಮ್ಮು, ಧಮ್ಮು ಇರುವುದನ್ನು ಗುಣಪಡಿಸಿಕೊಳ್ಳಲು ಮತ್ತು ರೋಗ ನಿರೋಧÀಕ ಶಕ್ತಿಯನ್ನು ಹೆಚ್ಚಿಸಲು ಇಲ್ಲಿವೇ ಕೆಲವು ಮನೆ ಮದ್ದುಗಳು.
ಮನೆ ಮದ್ದುಗಳು:
1) ಅಸ್ತಮಾ, ಕೆಮ್ಮು, ಧಮ್ಮು: ಈ ರೋಗಗಳು ಇದ್ದರೆ ಅಂತಹ ಜನರು ನಾಟಿ ಔಷಧಿಯಾದ ಸುಣ್ಣ ಮತ್ತು ಸೈದಲವನ ಉಪ್ಪಿನ ಜೊತೆಗೆ ಎಕ್ಕೆ ಬಸ್ಮವನ್ನು ತಯಾರಿಸಿ ಆ ಭಸ್ಮವನ್ನು ಒಂದು ಗುಂಜಿಯಷ್ಟು ದಿನದಲ್ಲಿ ಎರಡು ವೇಳೆ ವಿಳ್ಯೆದೆಲೆಯಲ್ಲಿ ತಿಂದರೆ ಅಸ್ತಮಾ, ಧಮ್ಮು, ಕೆಮ್ಮು, ಗಂಟಲು ನೋವು ಮಾಯವಾಗುತ್ತದೆ.
2) ಅಲರ್ಜೀ: ಗಂಟಲು ನೋವು, ಕೆಮ್ಮು, ನೆಗಡಿ, ಮೂಗು ಸೊರುತ್ತಿದ್ದರೆ ಅದಕ್ಕೆ ನಾಟಿ ಔಷಧಿಯಾದ ಅಪಮಾರ್ಗ ತೈಲ್ (ಉತ್ತರಾಣಿ ಎಣ್ಣೆ) ತಯಾರಿಸಿ ಮೂಗಿನಲ್ಲಿ ಎರಡು, ನಾಲ್ಕು ಹನಿ ಹಾಕಿದರೆ ತಕ್ಷಣ ಕಡಿಮೆಯಾಗುವುದು.
3) ರೋಗ ನಿರೋದಕ ಶಕ್ತಿ ಹೆಚ್ಚಿಸಲು: ಅಮೃತ ಬಳ್ಳಿ, ಅರಿಸಿನ, ತುಳಸಿ, ಬಿಲ್ವಪತ್ರಿ, ಕರಿಕಾಳು, ಶುಂಠಿ, ಲವಂಗ, ಬೆಳ್ಳುಳ್ಳಿ ಸೇರಿಸಿ ಕಸಾಯ ಮಾಡಿ ಕುಡಿದರೆ ರೋಗ ನಿರೋಧÀಕ ಶಕ್ತಿ ಹೆಚ್ಚಿಸುವುದರ ಜೊತೆಗೆ ಗಂಟಲು ನೋವು, ಕಫ್, ಜ್ವರ ಕಡಿಮೆಯಾಗುತ್ತದೆ.
ಪ್ರಾಚೀನ ಕಾಲದಿಂದಲೂ ಆಯುರ್ವೇದ ಶಾಸ್ತç ನಡೆದು ಬಂದಿದೆ. ಈ ಆರ್ಯುರ್ವೇದ ಔಷಧಿ ಸೇವನೆಯಿಂದ ಸರ್ವರೋಗ ನಿವಾರಣೆಯಾಗಿ ನಮ್ಮ ಜೀವನ ಸಮೃದ್ಧಿಯಿಂದ ಇರುವುದು. ಇಂತಹ ಆಯುರ್ವೇದ ಔಷಧಿಯನ್ನು ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ವಂಶಪಾರAಪರಾಗತವಾಗಿ ಹಲವಾರು ವರ್ಷಗಳಿಂದ ಆರ್ಯುರ್ವೇದ ನಾಟಿ ಔಷದಿ ಮತ್ತು ಸಲಹೆ ಸೂಚನೆಗಳನ್ನು ಉಚಿತವಾಗಿ ಪೂಜ್ಯ ಅಲ್ಲಯ್ಯ ಹಿರೇಮಠ ಸ್ವಾಮಿಜಿಯವರು ನೀಡುತ್ತಿದ್ದಾರೆ.
ಇಂದಿನ ದಿನ ಕರೋನ ವೈರಸ್ ಬಾರದಂತೆ ನಾವು ರೋಗನಿರೋದಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆಂಬುದರ ಜೊತೆಗೆ ಅಸ್ತಮಾ, ಕೆಮ್ಮು, ಧಮ್ಮು ತಡೆಗಟ್ಟುವ ವಿಧಾನ ತಿಳಿಸಿದ್ದಾರೆ.
ಬಾಕ್ಷ ಲೈನ:
1) “ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಹೇಳಿರುವಂತೆ ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಂಡು ದೇಶದಲ್ಲಿ ಮಾರಕ ಕೋರೊನ ವೈರಸ್ (ಕೋವಿಡ್ 19) ರೋಗ ಹರಡದಂತೆ ಮುಂಜಾಗ್ರತ ಕ್ರಮಗಳನ್ನು ಪಾಲಿಸುವುರೊಂದಿಗೆ ನಮ್ಮ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಔಷಧಿ ತಿಳಿಸಲಾಗಿದೆ. ನಾನು ಈಗಾಗಲೇ ದೂರವಾಣಿ, ಸಾಮಾಜಿಕ ಜಾಲತಾಣಗಳ ಮೂಲಕ ಜನರಲ್ಲಿ ಜನಜಾಗೃತಿ ಮೂಡಿಸುವುದರ ಜೊತೆಗೆ ನಾಟಿ ಔಷಧಿಗಳ ಮಾಹಿತಿ ತಿಳಿಸುತಿದ್ದೇನೆ. ಎಲ್ಲರು ಇದರ ಸದುಪಯೋಗ ಪಡೆದುಕೊಂಡು ನಾವೆಲ್ಲರೂ ಮಾರಕ ಕರೋನ ಸೊಂಕು ಬಾರದಂತೆ ಹೋರಾಡೋಣ”.
ನಾಟಿ ವೈದÀ್ಯ ಅಲ್ಲಯ್ಯಾ ಶಿ. ಹಿರೇಮಠ ಸಾ: ಮುಗಳಖೋಡ ತಾ| ರಾಯಬಾಗ ಜಿ| ಬೆಳಗಾವಿ.
ಮೋ: 9611951633, 9611738779.
Share
WhatsApp
Follow by Email