ಲಾಕ್‌ಡೌನ್ ಉಲ್ಲಂಘಸಿದವರಿಗೆ ಲಾಠಿ ಹಿಡಿದು ಜಡಾಯಿಸಿದ ಅಥಣಿ ತಹಶೀಲ್ದಾರ ದುಂಡಪ್ಪ ಕೊಮಾರ..



ಅಥಣಿ: ಲಾಕ್‌ಡೌನ್ ನಿಯಮ ಪಾಲಿಸದ ವರ್ತಕರು ಹಾಗೂ ಜನರನ್ನು ತಹಶಿಲ್ದಾರ ದುಂಡಪ್ಪ ಕೋಮಾರ್ ಸ್ವತಃ ಲಾಠಿ ಹಿಡಿದು ಜಡಾಯಿಸಿದ ಪ್ರಸಂಗ ಜರುಗಿದೆ. ಅಥಣಿ ತಹಶೀಲ್ದಾರ ದುಂಡಪ್ಪ ಕೋಮಾರ ಅವರು ಮಂಗಳವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಅಥಣಿ ಪಟ್ಟಣದ ಔಷಧ ಅಂಗಡಿಗಳ ಉಂದೆ ಲಾಕ್‌ಡೌನ ನಿಯಮಗಳನ್ನು ಗಾಳಿಗೆ ತೂರಿ ಜನರು ಮುಗಿ ಬಿದ್ದು ಔಷಧಗಳನ್ನು ಖರಿದಿ ಮಾಡುತ್ತಿರುದನ್ನು ಗಮನಿಸಿ ಸ್ಥಳಕ್ಕೆ ದೌಡಾಯಿಸಿದ ತಹಶೀಲ್ದಾರ ಅಂಗಡಿ ಮಾಲಿಕರನ್ನು ತರಾಟೆಗೆ ತೆಗೆದುಕೊಂಡುರು ಅಲ್ಲದೆ ಇದೆ ರೀತಿ ನಿಯಮ ಮೀರಿ ವ್ಯಾಪಾರ ಮಾಡಿದ್ದೇ ಆದಲ್ಲಿ ನಿಮ್ಮ ಮೇಲೆ ಎಫ್ ಐ ಆರ್ ದಾಖಲು ಮಾಡುವದಾಗಿ ಬಿಸಿ ಮುಟ್ಟಿಸಿದ ಘಟನೆ ನಡೆಯಿತು. ಅಲ್ಲದೆ ಪ್ರಧಾನಿ ನರೇಂಧ್ರ ಮೋಧಿ ಅವರು ಬಡವರ ಜನಧನ ಖಾತೆಗೆ 5 ನೂರು ರೂ.ಗಳನ್ನು ಜಮಾ ಮಾಡಿದ್ದರಿಂದ ಎಲ್ಲಿ ಹಣ ಮರಳಿ ತೆಗೆದುಕೊಳ್ಳುತ್ತಾರೋ ಅನ್ನುವ ಭಯದಲ್ಲಿ ಜನರು ಬ್ಯಾಂಕುಗಳ ಮುಂದೆ ಸಾಲು ಸಾಲಾಗಿ ನಿಂತು ಹಣ ಪಡೆಯಲು ಮುಂದಾಗಿ ನಿಯಮ ಪಾಲಿಸದೆ ಕೆಲವರು ಮುಖಕ್ಕೆ ಮಾಸ್ಕ ಸಹ ಹಾಕದೆ ಇರುವದನ್ನು ಗಮನನಿಸಿ ಬ್ಯಾಂಕಿನ ಮ್ಯಾನೇಜರ ಅವರನ್ನು ಹೋರಕ್ಕೆ ಕೆರೆಯಿಸಿ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಜನರನ್ನು ಸೋಸಿಯಲ್ ಅಂತರ ಕಾಯ್ದಕೊಳ್ಳುವಂತೆ ಸೂಚನೆ ನೀಡಿದ ತಹಶೀಲ್ದಾರ ಕೋಮಾರ. ಹಾಗಾಗಿ ಅಥಣಿ ತಾಲೂಕು ಆಡಳಿತ ಕಡ್ಡಾಯವಾಗಿ ಲಾಕ್‌ಡೌನ್ ನಿಯಮಗಳನ್ನು ಪರಿಪಾಲನೆ ಮಾಡದೆ ಇದ್ದರೆ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಸಾದ್ಯವಿಲ್ಲ ಎಂದು ಜನರಿಗೆ ಮನವಿ ಮಾಡಲಾಯಿತು.
ಈ ವೇಳೆ ಉಪತಹಶಿಲ್ದಾರ ಆರ್ ಆರ್ ಬುರ್ಲಿ ಮತ್ತು ಅಥಣಿ ಪೋಲಿಸ್ ಹಾಗೂ ಕೆಎಸ್ ಆರ್ ಪಿ ಸಿಬ್ಬಂದಿ ಉಪಸ್ಥಿತರಿದ್ದರು.
Share
WhatsApp
Follow by Email