ಬಡ ಕುಟುಂಬಗಳಿಗೆ ಜೀವನಾವಶ್ಯಕ ದಿನಸಿ ಸಾಮಗ್ರಿ ಗಳನ್ನು ವಿತರಿಸಿದ – ಅಸ್ಲಮ ನಾಲಬಂದ,

ಅಥಣಿ : ಭಾರತ ಲಾಕ್ ಡೌನ ಎಪ್ರಿಲ್, 14 ರಂದು ಮುಗಿಯುತ್ತದೆ ಎಂದು ನಿರೀಕ್ಷೆಯಲ್ಲಿದ್ದ ಬಡ ದಿನಗೂಲಿ ಕಾರ್ಮಿಕ ಕುಟುಂಬಗಳಿಗೆ ಸಿಹಿ ಸುದ್ದಿ ಬರಲಿಲ್ಲ ಏಕೆಂದರೆ ಕೊರೋನಾ ವೈರಸ್ ದೇಶಾದ್ಯಂತ ಹಬ್ಬುತ್ತಿದ್ದು ನೂರಾರು ಜನರನ್ನು ಬಲಿತೆಗೆದುಕೊಂಡು ತನ್ನ ಅಟ್ಟಹಾಸ ಮುಂದುವರಿಸಿದೆ ಹಾಗಾಗಿ ದೇಶದ ಜನರ ಜೀವ ಉಳಿಸುವ ಸಲುವಾಗಿ ಕೇಂದ್ರ ಸರ್ಕಾರ ಮತ್ತೆ ಮೇ, 03 ರ ವರೆಗೆ ಲಾಕ್ ಡೌನ್ ಮುಂದುವರಿಸಿರುವುದು ಬಡ ಕುಟುಂಬಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ದಿನಾಲು ಕೂಲಿ-ನಾಲಿ ಮಾಡಿ ರಾತ್ರಿ ಒಂದು ಹೊತ್ತಿನ ಊಟ ಮಾಡಿ ಮಲಗುತ್ತಿದ್ದ ದಿನಗೂಲಿ ಕಾರ್ಮಿಕರು ಒಪ್ಪತ್ತಿನ ಊಟಕ್ಕೂ ಗತಿ ಇಲ್ಲದೆ ಒದ್ದಾಡುವ ಸ್ಥಿತಿ ಇದ್ದು, ಅಂತದ್ರಲ್ಲಿ ಅಥಣಿ ಪಟ್ಟಣದಲ್ಲಿ ಅವಶ್ಯಕತೆ ಇರುವ ಬಡ 800 ಕುಟುಂಬಗಳಿಗೆ ಗೋದಿ, ಅಕ್ಕಿ, ಬೇಳೆ, ಸಕ್ಕರೆ, ಚಹಾ ಪುಡಿ, ಸನ್ ಪ್ಲಾನರ್ ಎಣ್ಣೆ, ಶೇಂಗಾ, ಅವಲಕ್ಕಿ, ಸೇರಿದಂತೆ ಸರಿಸುಮಾರು ಒಂದು ತಿಂಗಳಿಗೆ ಆಗುವಷ್ಟು ದಿನಬಳಕೆಯ ದಿನಸಿ ಸಾಮಗ್ರಿಗಳನ್ನು ಸಮಾಜಸೇವಕ ಹಾಗೂ ಮುಸ್ಲಿಂ ಮುಖಂಡ ಅಸ್ಲಮ್ ನಾಲಬಂದ ವಿತರಿಸಿ ಮಾನವೀಯತೆ ಮೆರೆದಿದ್ದಾರೆ
ಈ ವೇಳೆ ಸಮಾಜಸೇವಕ ಹಾಗೂ ಮುಸ್ಲಿಂ ಮುಖಂಡ ಅಸ್ಲಮ್ ನಾಲಬಂದ ಮಾತನಾಡಿ ಮಹಾಮಾರಿ ಕೊರೋನಾ ವಿಶ್ವಾದ್ಯಂತ ರಣಕೇಕೆ ಹಾಕಿ ಮಾನವ ಸಂಕುಲವನ್ನೇ ಸಂಕಷ್ಟಕ್ಕೆ ತಳ್ಳಿದೆ ಜನಸಾಮಾನ್ಯರ ದಿನ ನಿತ್ಯದ ಬದುಕಿಗೆ ಸಂಚಕಾರ ತಂದೊಡ್ಡಿದೆ. ದಿನಗೂಲಿಯನ್ನೇ ನಂಬಿ ಜೀವನ ಸಾಗಿಸುತ್ತಿರುವ ಕೂಲಿ ಕಾರ್ಮಿಕರು ಸೇರಿದಂತೆ ಬಡ ಜನರ ಬದುಕಿನಲ್ಲಿ ಕೊರೋನಾ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ.ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾನವೀಯತೆಯ ಉದಾರ ಮನಸ್ಸುಗಳು ಇಂತಹ ಸಮಯದಲ್ಲಿ ಬಡವರ ಕಷ್ಟಗಳಿಗೆ ಸ್ಪಂದಿಸಿ ಮಾನವೀಯ ಸೇವೆ ಮಾಡಲು ಮುಂದಾಗಬೇಕು
ಮಾನವ ಕುಲಕ್ಕೆ ಕೊರೋನಾ ಮಹಾಮಾರಿ ಆತಂಕವನ್ನುAಟುಮಾಡಿದೆ ಇದರ ವಿರುದ್ದ ಹೋರಾಟ ಅನಿವಾರ್ಯವಾಗಿದೆ ಇಂದು ಬಡವ, ಬಲ್ಲಿದ ಎನ್ನದೆ ಜಾತಿ ಧರ್ಮ ಎನ್ನುವ ಭೇದ ಭಾವ ವಿಲ್ಲದೇ ಎಲ್ಲರೂ ಸಂಕಷ್ಟದಲ್ಲಿದ್ದಾರೆ ಎಲ್ಲರೂ ಸಾಮಾಜಿಕ ಅಂತರ ಕಾಯ್ದು, ಮನೆಯಲ್ಲಿಯೇ ಇರಬೇಕು ಸರ್ಕಾರದ ನಿಯಮಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.ಇಡೀ ದೇಶವೇ ಸಂಪೂರ್ಣ ಲಾಕ್ ಡೌನ್ ಇರುವ ಈ ಸಂದರ್ಭದಲ್ಲಿ ಜನಸಾಮಾನ್ಯರ ಹಾಗೂ ಕೂಲಿ ಕಾರ್ಮಿಕರ ಜೀವನ ಆ ದೇವರಿಗೆ ಪ್ರೀತಿ ಇದೊಂದು ಅವಕಾಶ ಮಾನವನ ಉದಾರತೆಯ ಮಟ್ಟವನ್ನು ಪ್ರದರ್ಶಿಸಲು ಧನವಂತರು ಬಡವರ ಕಣ್ಣೀರೊರೆಸಲು ಮುಂದಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಲಾಂ ಕಲ್ಲಿ, ಯೂಸುಫ್ ನಾಲಬಂದ, ಸೈಯದ್ ಅಮೀನ್ ಗದ್ಯಾಳ, ಗುಲಾಬ್ ನಾಲಬಂದ, ಶಬ್ಬೀರ್ ಸಾತಬಚ್ಚೆ, ಉಮರ್ ಸೈಯದ್, ಯಾಸೀನ್ ಝಾರೆ, ರಸೂಲ್ ನದಾಫ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು
Share
WhatsApp
Follow by Email