ಒಬ್ಬ ವ್ಯಕ್ತಿ ಸಾವನ್ನಪ್ಪಿದ ಬಳಿಕ ಕಟ್ಟು ನಿಟ್ಟಿನ ಕ್ರಮ’

ವಿಜಯಪುರ: ಜಿಲ್ಲೆಯಲ್ಲಿ ಈವರೆಗೆ 282 ಸ್ಯಾಂಪಲ್‌ಗಳನ್ನು ಕೊರೊನಾ ತಪಾಸಣೆಗೆ ಕಳುಹಿಸಲಾಗಿದೆ. ಅದರಲ್ಲಿ 155 ವರದಿಗಳು ನೆಗೆಟಿವ್ ಬಂದಿವೆ. 7 ವರದಿಗಳು ಪಾಸಿಟಿವ್ ಬಂದಿವೆ. 7 ರಲ್ಲಿ ಓರ್ವ ವ್ಯಕ್ತಿ ಸಾವಿಗೀಡಾಗಿದ್ದಾರೆ ಅಂತಾಕ್ರಮದಲ್ಲಿ’ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್ ತಿಳಿಸಿದ್ದಾರೆ.
‘ಒಬ್ಬ ವ್ಯಕ್ತಿ ಸಾವನ್ನಪ್ಪಿದ ಬಳಿಕ ಕಟ್ಟು ನಿಟ್ಟಿನ ಕ್ರಮ’
ವಿಜಯಪುರದಲ್ಲಿ ಮಾತನಾಡಿದ ಅವರು, 120 ಮಂದಿಯ ತಪಾಸಣೆ ವರದಿ ಬರುವುದು ಬಾಕಿ ಇದೆ. ಈಗ 348 ಜನರ ಮೇಲೆ ನಿಗಾ ಇಡಲಾಗಿದೆ ಅಂತಾ ಹೇಳಿದರು. ಕೊರೊನಾ ಪಾಸಿಟಿವ್ ಬಂದಿರುವ 7 ಜನರ ಪ್ರೈಮರಿ ಕಾಂಟ್ಯಾಕ್ಟ್ ಮಾಹಿತಿ ಸಂಗ್ರಹಿಸಲಾಗಿದೆ. ಈ ಸಂಬಂಧ 300 ಜನರ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. 7 ಪಾಸಿಟಿವ್ ರೋಗಿಗಳ ಚಿಕಿತ್ಸೆಯ ಮೇಲೆ ನಿಗಾ ಇಡಲಾಗಿದೆ.
50 ಸಿಸಿಟಿವಿ ಮೂಲಕ ಗಮನ ಹರಿಸಲಾಗಿದೆ. ಅಲ್ಲದೇ 5 ಆಸ್ಪತ್ರೆಗಳ ಒಟ್ಟು 70 ಜನ ವೈದ್ಯರು ಮತ್ತು ಇತರ ಸಿಬ್ಬಂದಿಯ ಗಂಟಲು ದ್ರವಗಳ ಮಾದರಿಗಳನ್ನೂ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುವುದು ಎಂದರು.
ಕೊರೊನಾ ಪಾಸಿಟಿವ್ ಪ್ರಕರಣಗಳು ಬಂದ ನಂತರ ಜಿಲ್ಲೆಯಾದ್ಯಂತ ಕಟ್ಟು ನಿಟ್ಟಾಗಿ ಕ್ರಮ ಕೈಗೊಳ್ಳಲಾಗಿದೆ. ಗ್ರಾಮ, ಪಟ್ಟಣ, ನಗರಗಳಲ್ಲಿ ಯಾವುದೇ ಸಾವುಗಳು ಸಂಭವಿಸಿದರೆ ಮಾಹಿತಿ ನೀಡಲು ಸೂಚಿಸಲಾಗಿದೆ. ಯಾರೇ ಸಾವಿಗೀಡಾದರೂ ಅಂತ್ಯಕ್ರಿಯೆಯ ಮುಂಚೆ ಸಮಗ್ರ ವಿಚಾರಣೆ ನಡೆಸಲಾಗುತ್ತಿದೆ ಅಂತಾ ಹೇಳಿದ ಅವರು
ಇನ್ನು ಕೊರೊನಾ ಪಾಸಿಟಿವ್ ವರದಿಗಳು ಬಂದ ಮೇಲೆ ರೈತರು ಎಪಿಎಂಸಿಗೆ ಬರುತ್ತಿಲ್ಲ. ಈ ಹಿನ್ನೆಲೆ ವಿಜಯಪುರ ನಗರದ 5 ಕಡೆ ತರಕಾರಿ, ಹಣ್ಣುಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ನಗರದ ಸಿಂದಗಿ ರಸ್ತೆಯ ಶಿವಗಿರಿ, ಸೋಲಾಪುರ ರಸ್ತೆಯ ಎಂ.ಬಿ. ಪಾಟೀಲ್ ನಗರದ ಸ್ಯಾಟಲೈಟ್ ಬಸ್ ನಿಲ್ದಾಣ, ಬಬಲೇಶ್ವರ ರಸ್ತೆಯ ನವಭಾಗ ಡಬಲ್ ರಸ್ತೆ, ಇಬ್ರಾಹಿಂಪುರ ರಿಂಗ್ ರೋಡ್‌ನ ಸೇಂಟ್ ಜೋಸೆಫ್ ಗ್ರೌಂಡ್ ಬಳಿ ವ್ಯವಸ್ಥೆ ಮಾಡಲಾಗಿದೆ. ಹಾಪಕಾಮ್ಸ್‌ಗಳಿಂದ ಹೆಚ್ಚುವರಿ ವಾಹನಗಳ ವ್ಯವಸ್ಥೆ ಮಾಡಲಾಗಿದೆ ಅಂತಾ ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
Share
WhatsApp
Follow by Email