BIG NEWS: ಮೇ 3ರ ತನಕ ಎರಡನೇ ಹಂತದ ಲಾಕ್‌ಡೌನ್‌ ವಿಸ್ತರಣೆ, ಪ್ರಧಾನಿ ಮೋದಿಯಿಂದ ಘೋಷಣೆ

ನವದೆಹಲಿ : ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದ 21 ದಿನಗಳ ಲಾಕ್‌ ಡೌನ್ ಅವಧಿ ಇಂದಿಗೆ ಮುಕ್ತಾಯವಾಗಿದೆ. ಈ ನಡುವೆ ಇಂದು ಪ್ರಧಾನಿ ಮೋದಿಯವರು ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದು, ಇದೇ ವೇಳೆ ಅವರು ಮಾತನಾಡುತ್ತ ಭಾರತದಾದ್ಯಂತ ಎರಡನೇ ಹಂತದ ಲಾಕ್‌ಡೌನ್‌ ಅನ್ನು ಮೇ 3 ತನಕ ವಿಸ್ತರಣೆ ಮಾಡಲಾಗುವುದು ಅಂಥ ಘೋಷಣೆ ಮಾಡಿದರು.
ಇನ್ನು ಕೇಂದ್ರ ಸರ್ಕಾರಕ್ಕೂ ಮುನ್ನ ಒಡಿಶಾ, ಪಂಜಾಬ್, ಪಶ್ಚಿಮ ಬಂಗಾಳ, ತೆಲಂಗಾಣ, ಕರ್ನಾಟಕ ಲಾಕ್‍ಡೌನ್ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಕೊರೊನಾ ನಿಯಂತ್ರಣ ಮಾಡುವುದಕ್ಕೆ ಸಂಬಂಧಪಟ್ಟಂತೆ ಪ್ರಧಾನಿ ಮೋದಿಯವರು ಇದು ಸೇರಿ ಮೂರನೇ ಬಾರಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ದೇಶವನ್ನು ರಕ್ಷಿಸಲು ಭಾರತದ ಜನರು ದಿನಗಳಿಂದ ಯಾವ ರೀತಿಯ ತೊಂದರೆಗಳನ್ನು ಸಹಿಸಿಕೊಳ್ಳುತ್ತಿದ್ದಾರೆಂದು ನನಗೆ ತಿಳಿದಿದೆ. ನೀವು ಆಹಾರ, ಕೆಲಸದ ತೊಂದರೆಗಳನ್ನು ಎದುರಿಸಿದ್ದೀರಿ, ಆದರೆ ನೀವು ಇನ್ನೂ ಹೋರಾಡಲು ನಿರ್ಧರಿಸಿದ್ದೀರಿ ಅಂತ ಹೇಳಿದರು. ಇದೇ ವೇಳೆ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿವಸವಾದ ಇಂದು ಪ್ರಧಾನಿ ಮೋದಿ ಅವರು ಶುಭಾಶಯ ಕೋರಿದರು. ವಿದೇಶದಿಂದ ಬಂದವರನ್ನು ಸ್ಕ್ರೀನಿಂಗ್ ಮಾಡಿದ್ದೇವೆ. ನಿಮ್ಮ ನಿಮ್ಮ ಪರಿವಾರದ ಆರೋಗ್ಯಕ್ಕಾಗಿ ನಾನು ಪ್ರಾರ್ಥನೆ ಮಾಡುವೆ ಅಂತ ಹೇಳಿದರು. ವಿದೇಶಗಳಿಗೆ ಹೋಲಿಕೆ ಮಾಡಿದ್ರೆ ಕೋರಾನ ಹೋರಾಟದಲ್ಲಿ ನಾವು ಮುಂದೆ ಇದ್ದೇವೆ ಆಂತ ಹೇಳಿದರು. ವಿದೇಶಗಳಲ್ಲೂ ಕೂಡ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ ಅಂತ ಹೇಳಿದರು. ಇನ್ನು ಸಾಮಾಜಿಕ ಅಂತರ ಎನ್ನುವುದು ಬಹಳ ಪ್ರಮುಖ ಪ್ರಮುಖವಾದ ಅಂಶವಾಗಿದೆ ಅಂತ ಹೇಳಿದರು. ಭಾರತವು ಯಾವುದೇ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡುವ ಮೊದಲೇ ಸ್ಕ್ರೀನಿಂಗ್ ಪ್ರಾರಂಭವಾಯಿತು ಅಂತ ಹೇಳಿದರು. ಭಾರತೀಯರ ಜೀವದ ಮುಂದೆ ಆರ್ಥಿಕತೆ ದೊಡ್ಡದಲ್ಲ ಅಂತ ಹೇಳಿದರು.
Share
WhatsApp
Follow by Email