ಗ್ರಾ.ಪಂ ಸದಸ್ಯ ರವರ ಮನೆಯೊಂದರಲ್ಲಿ ಚಿರತೆ ಪ್ರತ್ಯಕ್ಷ ಭಯಬೀತರಾದ ಗ್ರಾಮಸ್ಥರು.

ಗ್ರಾ.ಪಂ ಸದಸ್ಯ ರವರ ಮನೆಯೊಂದರಲ್ಲಿ ಚಿರತೆ ಪ್ರತ್ಯಕ್ಷ
ಭಯಬೀತರಾದ ಗ್ರಾಮಸ್ಥರು.
ಮಳವಳ್ಳಿ ತಾಲ್ಲೂಕಿನ ಮಂಚನಹಳ್ಳಿ ಗ್ರಾಮದಲ್ಲಿ ನಡೆದ ಘಟನೆ.
ಕಳೆದ ರಾತ್ರಿ ಮಂಚನಹಳ್ಳಿ ಗ್ರಾಮದ ಗ್ರಾಮಪಂಚಾಯಿತಿ ಸದಸ್ಯ ಶ್ರೀನಿವಾಸ್ ರವರ ರೇಷ್ಮೆ ಸಾಗಾಣಿಕೆಗೆ ಮಾಡಲು ಹೊಸದಾಗಿ ಮನೆ ಕಟ್ಟಿದ್ದು ಅಲ್ಲಿಗೆ ಚಿರತೆ ಕಾಣಿಸಿಕೊಂಡಿದೆ.
ಮನೆಯೊಳಗೆ ಹೋದ ತಕ್ಷಣ ಗ್ರಾಮಸ್ಥರು ಮನೆಯ ಬಾಗಿಲು ಹಾಕಿ ಬಂದಿಸಿದ್ದಾರೆ.
ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ ಅವರ ವಶಕ್ಕೆ ನೀಡಲಾಗಿದೆ.
ಸ್ಥಳಕ್ಕೆ ಅರಣ್ಯ ಅಧಿಕಾರಿ ಅಸಿಫ್ ಬೇಟಿ ಪರಿಶೀಲನೆ ನಡೆಸಿ ದ್ದು, ಚಿರತೆ ಸುಮಾರು 2 ವರ್ಷಯಾಗಿದೆ.
ಚಿರತೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಇಡೀ ಗ್ರಾಮವೇ ಭಯದ ವಾತವರಣದಲ್ಲಿದ್ದಾರೆ.
ನಮಗೆ ರಕ್ಷಣೆ ಬೇಕಾಗಿದೆ ಎಂದು ಆಗ್ರಹಸಿದ್ದಾರೆ.
ರಾತ್ರಿಯಡಿ ಮನೆಯಲ್ಲೇ ಚಿರತೆವಿದ್ದು ಬೆಳಿಗ್ಗೆ ಸೆರೆ ಹಿಡಿದು ಕಾಡಿಗೆ ಬಿಡುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.
ವರದಿ :ಕೃಪ ಸಾಗರ್ ಗೌಡ
Share
WhatsApp
Follow by Email