ಕೊರೊನಾ ವೈರಸ್ ಇಡೀ ಭಾರತ ದೇಶವನ್ನಲ್ಲದೆ ವಿಶ್ವವನೇ ತಲ್ಲಣಗೊಳಿಸಿದೆ

ಮಹಾಲಿಂಗಪುರ : ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ ಇಡೀ ಭಾರತ ದೇಶವನ್ನಲ್ಲದೆ ವಿಶ್ವವನ್ನೇ ತಲ್ಲಣಗೊಳಿಸಿದೆ.ರೋಗಾಣು ತಡೆದು ಎಲ್ಲರ ಆರೋಗ್ಯವನ್ನು ಕಾಪಾಡುವುದಕ್ಕೆ ಸರ್ಕಾರಗಳು ಹೆಣಗಾಡುತ್ತಿದ್ದರೆ ಮಹಾಲಿಂಗಪುರದಲ್ಲಿ ಸಾರ್ವಜನಿಕರು ಇದಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಎಲ್ಲೆಂದರಲ್ಲಿ ಗುಂಪು, ಗುಂಪಾಗಿ ನಿಲ್ಲುವುದು ಅಡ್ಡಾಡುವುದು, ಅಂತ್ಯಸoಸ್ಕಾರದಲ್ಲಿ ಕಡಿಮೆ ಜನ ಸೇರಬೇಕೆನ್ನುವ ನಿಯಮವಿದ್ದರೂ ಅದನ್ನು ಗಾಳಿಗೆ ತೂರಿ ನೂರಾರು ಜನರು ಸೇರುತ್ತಿರುವುದು ಮಾತ್ರ ಉಳಿದ ಸಾರ್ವಜನಿಕರಲ್ಲಿ ಆತಂಕವನ್ನು ತಂದೊಡ್ಡಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನೇಕ ರೀತಿಯ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡರೂ ಕೂಡ ಸಾರ್ವಜನಿಕರಲ್ಲಿ ಕೋರೋಣ ರೋಗ ಹತೋಟಿಗೆ ತರುವಂತಹ ಸ್ಪಂದನೆ ಕಂಡುಬರುತ್ತಿಲ್ಲ ಎನ್ನುವುದಕ್ಕೆ ಉತ್ತಮ ಉದಾಹರಣೆ ಇತ್ತಿಚೆಗೆ ಶನಿವಾರ ನಿಧನರಾದ ಬಸವನಗರ ವ್ಯಕ್ತಿಯ ಅಂತ್ಯಸoಸ್ಕಾರದಲ್ಲಿ ಸುಶಿಕ್ಷಿತರು, ಬುದ್ಧಿಜೀವಿಗಳು, ಸಮಾಜದ ಹಿರಿಯರು ಅಲ್ಲದೆ ಊರಿನ, ಪರವೂರಿನ ನೂರಾರು ಜನರು ಸೇರಿದ್ದರು.
ಈ ಜನ ಸಮೂಹದಲ್ಲಿ ಸಾಮಾಜಿಕ ಅಂತರವಿರದೆ ಅಲ್ಲಲ್ಲಿ ಗುಂಪು, ಗುಂಪಾಗಿ ಮಾತನಾಡುವ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು .ಅಲ್ಲದೆ ಅರ್ಧಕ್ಕಿಂತ ಹೆಚ್ಚಿನ ಜನರ ಮುಖದ ಮೇಲೆ ಮಾಸ್ಕ ಇರದ ಅವರಲ್ಲಿ ಕರೋನವೈರಸ್ ರೋಗದ ಭಯ ಕಾಡುತ್ತಿರಲಿಲ್ಲವೇನೋ ಎಂಬoತೆ ಬಿಂದಾಸ್ ಇದ್ದರು.
ನಾಲ್ಕಕ್ಕಿಂತ ಹೆಚ್ಚು ಜನ ಸೇರಬಾರದು ಎನ್ನುವ ನಿಯಮವಿದ್ದರೂ ಅದನ್ನು ಗಾಳಿಗೆ ತೂರಿ ನಮಗೆ ಏನೂ ಆಗುವುದಿಲ್ಲವೆಂದು ಭಂಡ ಧೈರ್ಯದಿಂದ ಈ ಸಮೂಹ ಸಾಗುತ್ತಿತ್ತು. ಯಾರೋ ಮಾಡುವ ತಪ್ಪಿಗೆ ಅಮಾಯಕರು ಬಲಿಯಾಗುವ ಪ್ರಮೇಯ ಬಂದೊದಗಿದ್ದು ನಮ್ಮ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
ಕ್ಷಣಕ್ಷಣಕೂ ವಾಟ್ಸಾಪ್, ಫೇಸ್ಬುಕ್ ,ಯೂಟ್ಯೂಬ್, ಅಲ್ಲದೆ ದೃಶ್ಯ, ಮುದ್ರಾ ಮಾಧ್ಯಮಗಳಲ್ಲಿ ಜಿಲ್ಲಾಡಳಿತ,ಸ್ಥಳೀಯ ಪುರಸಭೆ, ಪಟ್ಟಣ ಪಂಚಾಯಿತಿ ನೀಡುವ ಶೀಘ್ರ ಪ್ರಕಟಣೆಗಳು ರೋಗದ ಭಯಂಕರತೆ,ಅದಕ್ಕೆ ಪರಿಹಾರಗಳು ಪ್ರಸಾರಗೊಳ್ಳುತ್ತಿದ್ದರೂ ಸಾರ್ವಜನಿಕರಲ್ಲಿ ಮಾತ್ರ ಉದಾಸೀತೆ ಎದ್ದು ಕಾಣುತ್ತಿದೆ. ಜನತೆ ಎಚ್ಛೆತ್ತುಕ್ಕೊಳ್ಳದಿದ್ದರೆ ಇವತ್ತು ಸಸಿಯಾಗಿರುವ ರೋಗ ನಾಳೆ ಹೆಮ್ಮರವಾಗಿ ಎಲ್ಲರನ್ನು ದುರಂತಡೆದೆ ಒಯ್ಯಬಹುದು.
ಇಂತಹ ಸನ್ನಿವೇಶದಲ್ಲಿ ಮೂಢನಂಬಿಕೆ ಅಥವಾ ಅನುಕಂಪದ ಅಲೆ ಎನ್ನುತ್ತಿರೋ ಒಟ್ಟಿನಲ್ಲಿ ಸಮಾಜದ ಪ್ರಭಾವಿ ವ್ಯಕ್ತಿಗಳ ಮುಖಾಂತರ ಅಧಿಕಾರಿಗಳ ಮೇಲೆ ಒತ್ತಡವನ್ನು ಹೇರಿ ಈ ರೀತಿಯ ತಪ್ಪು ಮಾರ್ಗವನ್ನು ಜನತೆ ತುಳಿಯುತ್ತಾರೆ. ಇಂತಹ ಅವಕಾಶಗಳಿಗೆ ಅಧಿಕಾರಿಗಳು ಆಸ್ಪದ ನೀಡಬಾರದು. ನೀಡಿದರೆ ಮುಂದೆ ಆಗುವ ಘೋರ ಪರಿಣಾಮಗಳಿಗೆ ಅಧಿಕಾರಿಗಳೆ ಹೊಣೆಯಾಗಬೇಕಾಗುತ್ತದೆ.ಆದ್ದರಿಂದ ತಮಗೆ ಸರಕಾರ ನೀಡಿದ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದು ಅಮಾಯಕರ ಪ್ರಾಣಗಳನ್ನು ಉಳಿಸಬೇಕಾಗಿರುವುದು ತಮ್ಮ ಆದ್ಯ ಕರ್ತವ್ಯವಾಗಿದೆ
ವರದಿ : ಮೀರಾ. ಎಲ್.ತಟಗಾರ
Share
WhatsApp
Follow by Email