ಬ್ರೇಕಿಂಗ್ ನ್ಯೂಸ್

ಪಾಲಭಾಂವಿ : ಭಾರಿ ಪ್ರಮಾಣದ ಹಾಲು ಕಾಲುವೆ ಪಾಲು

ಚಿಕ್ಕೋಡಿ: ಮಾಹಾಮಾರಿ ಕೊರೊನಾ ವೈರಸ್ ಸೋಂಕು ಹರಡಿರುವ ಹಿನ್ನೆಲೆಯಲ್ಲಿ ದೇಶವೇ ಲಾಕ್ ಡೌನ್ ಆದ ಪರಿಣಾಮ ಹಾಲು ಮಾರಾಟವಾಗಲಿಲ್ಲ ಎನ್ನಲಾದ ಕಾರಣಕ್ಕಾಗಿ ಭಾರಿ ಪ್ರಮಾಣದ ಹಾಲನ್ನು ಉತ್ಪಾದಕರು ಕಾಲುವೆ ಪಾಲು ಮಾಡಿದ ಘಟನೆ ರಾಯಭಾಗ ತಾಲೂಕಿನ ಪಾಲಭಾವಿಯಲ್ಲಿ ನಡೆದಿದೆ
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಿದೆ . ರಾಯಬಾಗ ತಾಲ್ಲೂಕಿನ ಪಾಲಭಾವಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ . ಬರೋಬ್ಬರಿ 58 ಕ್ಯಾನುಗಳಲ್ಲಿದ್ದ ( ತಲಾ 25 ಲೀಟರ್ ಸಾಮರ್ಥ್ಯ ) ಹಾಲನ್ನು ಯುವಕನೊಬ್ಬ ಘಟಪ್ರಭಾ ಎಡದಂಡೆ ಕಾಲುವೆಗೆ ಚೆಲ್ಲಿದ್ದಾರೆ . ಕೊರೊನಾ ವೈರಸ್ ನಿನಗೆ ಹಾಲು ಉಧೋ ಉಧೋ ಎನ್ನುವುದು ,ಕೊರೊನಾ ಗೊ ಎಂದು ಹೇಳುತ್ತಾ ಹರಿಯುವ ನೀರಿನಲ್ಲಿ ಹಾಲನ್ನು ಸುರಿದು ಪಂಚಾಯಿತಿಯವರು ಸಾಗಿಸಲು ಬಿಡಲಿಲ್ಲ ಹಾಗೂ ಸೀಜ್ ಮಾಡಿದ್ದಾರೆ ಎನ್ನುವ ಮಾತುಗಳನ್ನು ವಿಡಿಯೊ ಮಾಡಿದವರು ಆಡುತ್ತಿರುವುದು ವಿಡಿಯೊದಲ್ಲಿದೆ . ಹಾಲು ಸುರಿದವರು ಅಲ್ಲಿನ ಗೌಳಿ ಸಮಾಜದವರು ಎನ್ನಲಾಗುತ್ತಿದೆ . ಖಚಿತ ಕಾರಣ ತಿಳಿದುಬಂದಿಲ್ಲ . ಯಾರಿಗೆ ಸೇರಿದ್ದು ಎನ್ನುವುದೂ ಸ್ಪಷ್ಟವಾಗಿಲ್ಲ . ಲಾಕ್ ಡೌನ್ ನಿಂದಾಗಿ , ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತವರಲ್ಲೇ ಹೈನುಗಾರರಿಗೆ ತೊಂದರೆ ಆಗುತ್ತಿದೆ . ಪೊಲೀಸರು ಹಾಲಿನ ವಾಹನಗಳಿಗೂ ತಡೆ ಒಡ್ಡಿದ್ದಾರೆ . ಹೀಗಾಗಿ ಮಾರಾಟ ಸಾಧ್ಯ ಆಗುತ್ತಿಲ್ಲ ಎಂದು ಆರೋಪಿಸಲಾಗುತ್ತಿದೆ .

About the author

Mallu Bolanavar