ಬ್ರೇಕಿಂಗ್ ನ್ಯೂಸ್

ಅರಟಾಳ : ಮುಂಜಾಗ್ರತೆ ಕ್ರಮಗಳಿಗೆ ಸೊಪ್ಪೆಹಾಕದ ಯುವಕರಿಗೆ ಹೊಸ ರೀತಿಯಲ್ಲಿ ಬಿಸಿ ಮುಟ್ಟಿಸಲು ಗ್ರಾಪಂ

ಅರಟಾಳ ; ಕರೊನಾ ವೈರಸ್ ಹರಡುವಿಕೆಯನ್ನು ತಡೆಯಲು ಆರೋಗ್ಯ ಇಲಾಖೆ, ಪೋಲಿಸ್ ಇಲಾಖೆ ಮತ್ತು ಗ್ರಾಮ ಪಂಚಾಯತಿ ವತಿಯಿಂದ ಕಟ್ಟನಿಟ್ಟನ ಕ್ರಮ ತಗೆದುಕೊಂಡರು ಇದಕ್ಕೆ ಸೊಪ್ಪೆಹಾಕದ ಯುವಕರಿಗೆ ಹೊಸ ರೀತಿಯಲ್ಲಿ ಬಿಸಿ ಮುಟ್ಟಿಸಲು ಗ್ರಾಮ ಪಂಚಾಯತ ಮುಂದಾಗಿದೆ. ಗ್ರಾಮದಲ್ಲಿ ಯುವಕರು ಗುಂಪು ಗುಂಪಾಗಿ ಕುಳಿತುಕೊಳ್ಳುವ ಗ್ರಾಮದ ಯುವಕರು ಕುಳಿತುಕೊಳ್ಳುವ ಕಟ್ಟೆಗಳಾದ ದುರ್ಗಾದೇವಿ ದೇವಸ್ಥಾನದ ಕಟ್ಟೆ, ಹನುಮಾನ ದೇವಸ್ಥಾನದ ಕಟ್ಟೆ ಹಾಗೂ ಅಂಗಡಿ ಮುಂಬಾಗದ ಕಟ್ಟೆಗಳ ಮೇಲೆ ಸುಟ್ಟ ಕರಿ ಆಯಿಲ್ ಸುರಿದು ಕುಳಿತುಕೊಳ್ಳಲು ಬಾರದಂತೆ ಮಾಡಿದ್ದಾರೆ.
ರಾಜ್ಯದಲ್ಲಿ ಕರೊನಾ ವೈರಸ್ ಸಲುವಾಗಿ ಲಾಕ್ ಡೌನ್ ಆದೇಶವಿದ್ದರು ನಿಯಮ ಮೀರಿ ಕಟ್ಟೆಗಳ ಮೇಲೆ ಯುವಕರು ಮೊಬೈಲ್ ಹಿಡಿದುಕೊಂಡು ಕಾಲ ಹರಣ ಮಾಡುತ್ತಿದ್ದರು. ಪೋಲಿಸ್‌ರು ಬಂದಾಗ ಓಡಿ ಹೋಗಿ ಮತ್ತೆ ಅವರು ಹೋದ ನಂತರ ಕಟ್ಟೆಗಳ ಮೇಲೆ ಕುಳಿತುಕೊಳ್ಳುತ್ತಿದ್ದರು. ಆದರಿಂದ ಗ್ರಾಮ ಪಂಚಾಯತ ಈ ಕ್ರಮವನ್ನು ಕೈಗೊಂಡಿದೆ. ಈಗಲಾದರು ಯುವಕರು ಕಟ್ಟೆ ಮೇಲೆ ಕುಳಿತುಕೊಳ್ಳುವುದು ರಸ್ತೆಯ ಬದಿಗಳಲ್ಲಿ ನಿಂತುಕೊಳ್ಳುವುದು ಮಾಡಬಾರದು. ಲಾಕ್ ಡೌನ್ ಮುಗಿಯುವವರೆಗೆ ಎಲ್ಲರು ಮನೆಯಲ್ಲಿ ಕಾಲ ಕಳೆಯಬೇಕು ಎನ್ನುವುದು ಗ್ರಾಮ ಪಂಚಾಯತ ಕಳಕಳೆಯಾಗಿದೆ.

About the author

Mallu Bolanavar