ಸರಕಾರದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ : ಡಾ. ರಾಜೇಂದ್ರ ಸಣ್ಣಕ್ಕಿ

ಕೌಜಲಗಿ: ಮಹಾಮಾರಿ ಕೊರೋನಾ ಸೊಂಕು ತಗುಲದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸರಕಾರದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಳ್ಳುವಂತೆ ಜಿ. ಪಂ. ಮಾಜಿ ಸದಸ್ಯ ಡಾ. ರಾಜೇಂದ್ರ ಸಣ್ಣಕ್ಕಿ ಹೇಳಿದರು.
ಅವರು ಕೌಜಲಗಿ ಗ್ರಾಮ ಪಂಚಾಯತ್ ಆವರಣದಲ್ಲಿ ಜರುಗಿದ ಕೊರೋನಾ ಸೋಂಕು ಸಂಬಂಧ ಮುಂಜಾಗ್ರತೆ ಸಭೆಯಲ್ಲಿ ಮಾತನಾಡಿದರು.
ಕೊರೋನಾ ವೈರಸ್ ಇಡೀ ಜಗತ್ತನ್ನೇ ಆವರಿಸಿದೆ. ಭಾರತಕ್ಕೂ ಲಗ್ಗೆ ಇಟ್ಟಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಾರ್ವಜನಿಕರ ಸುರಕ್ಷತೆಗಾಗಿ ಹಲವು ದಿಟ್ಟ ಕ್ರಮಗಳನ್ನು ಕೈಗೊಂಡಿದೆ. ಅವುಗಳನ್ನು ಪಾಲಿಸುವಂತೆ ಹೇಳಿದರು.
ಶಾಸಕರ ಆಪ್ತ ಕಾರ್ಯದರ್ಶಿ ನಾಗಪ್ಪ ಶೇಖರಗೋಳ ಮಾತನಾಡಿ, ಯಾರೂ ಅನಗ್ಯತೆವಾಗಿ ಮನೆಯಿಂದ ಹೊರಗೆ ಬರಬೇಡಿ. ಏ. 14ರ ವರೆಗೆ ಭಾರತ ಲಾಕ್ ಡೌನ್ ಆಗಿದೆ. ಪ್ರಧಾನಿ ಮೋದಿಯವರು, ಕೊರೋನಾ ಭೀತಿ ಹಿನ್ನೆಲೆಯಲ್ಲಿ ಬಡವರು, ಕಾರ್ಮಿಕ ವರ್ಗದವರಿಗೆ ನೆರವು ಪ್ರಕಟಿಸಿದ್ದಾರೆ. 1.70ಲಕ್ಷ ಕೋ ರೂ. ಪ್ಯಾಕೇಜ್ ಘೋಷಿಸಿದ್ದಾರೆ. ಬಿಪಿಎಲ್ ಕಾರ್ಡುದಾರರಿಗೆ 3 ತಿಂಗಳ 5 ಕಿಲೋ. ಅಕ್ಕಿ/ ಗೋಧಿ, ಪ್ರತಿ ಕುಟುಂಬಕ್ಕೆ ಒಂದು ಕಿಲೋ ಆಹಾರ ಧಾನ್ಯಗಳನ್ನು ನೀಡಲು ಕ್ರಮಗಳನ್ನುಕೈಗೊಂಡಿದ್ದಾರೆ. ಉಜ್ವಲ ಫಲಾನುಭವಿಗಳಿಗೆ ಮೂರು ತಿಂಗಳು ಉಚಿತ ಗ್ಯಾಸ್ ಸಿಲಿಂಡರ್ ವಿತರಣೆ ಮಾಡಲಾಗುತ್ತದೆ. ವ್ಯೆದ್ಯ ಸಿಬ್ಬಂದಿ ವರ್ಗದವರಿಗೆ ರೂ. 50 ಲಕ್ಷ ವರೆಗೆ ಆರೋಗ್ಯ ವಿಮೆಯನ್ನು ಸಹ ಪ್ರಕಟಿಸಿದ್ದಾರೆ. ಕೊರೋನಾ ತಡೆಯಲು ಲಾಕ್ ಡೌನ ಯಶಸ್ವಿ ಗೊಳಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ. ಯಾರೂ ಕೂಡ ಮನೆಯಿಂದ ಹೊರಗೆ ಬರದಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಕುಲಗೋಡ ಪಿಎಸ್ ಐ ಹನಮಂತ ನರಳೆ ಮಾತನಾಡಿ, ಸಾರ್ವಜನಿಕರಿಗಾಗಿ ಅಗತ್ಯ ದಿನಸಿ ಸಾಮಾನು ಖರೀದಿಗೆ ಬೆ. 7 ರಿಂದ 10ರ ವರೆಗೆ ಅಂಗಡಿಗಳನ್ನು ತೆರೆಯಲು ಅವಕಾಶ ಇರುತ್ತದೆ. ತರಕಾರಿ ವ್ಯಾಪಾರಿಗಳು ಮನೆ ಮನೆಗೆ ಬರುತ್ತಾರೆ. ಪ್ರತಿಯೊಬ್ಬರೂ ಮಾಸ್ಕ ಧರಿಸಬೇಕು. ಅಂತರವನ್ನು ಕಾಪಾಡಿಕೊಳ್ಳಲು
ತಿಳಿಸಿದರು. ಯಾರಾದರೂ ನಿಯಮಗಳನ್ನು
ಉಲ್ಲಂಘಿಸಿದರೆ ಕಾನೂನು ಪ್ರಕಾರ ಶಿಸ್ತು ಕ್ರಮಗಳನ್ನು ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಗ್ರಾ. ಪಂ. ಅಧ್ಯಕ್ಷ ರಜಮಾನ ಪೋದಿ, ತಾ.ಪಂ.ಸದಸ್ಯ ಶಾಂತಪ್ಪ ಹಿರೇಮೇತ್ರಿ, ಮುಖಂಡರಾದ ಶಿವು ಲೋಕನ್ನವರ, ಅಶೋಕ ಉದ್ದಪನವರ, ಬಿ. ಎ. ಲೋಕನವರ, ರವೀಂದ್ರ ಪರುಶೆಟ್ಟಿ, ಜಗದೀಶ ಭೋವಿ, ರಾಯಪ್ಪ ಬಳೋಲದಾರ, ನೀಲಪ್ಪ ಕೀವಟಿ, ಮಂಜು ಭೋವಿ, ಸುಭಾಷ ಕೌಜಲಗಿ, ವೈದ್ಯಾಧಿಕಾರಿ ಡಾ. ನಾಡಗೌಡ, ಪ್ರಶಾಂತ್ ಸಣ್ಣಕ್ಕಿ, ಗ್ರಾ.ಪಂ.ಸದಸ್ಯರು, ಆರೋಗ್ಯ ಇಲಾಖೆಯ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಸಭೆ ನಡೆಯುವಾಗ ಎಲ್ಲರೂ ಸಾಮಾಜಿಕ ಅಂತರ ಕಾಯ್ದು ಕೊಂಡಿದ್ದು ವಿಶೇಷವಾಗಿತ್ತು.
ವರದಿ: ಕೆ.ವಾಯ್ ಮೀಶಿ
Share
WhatsApp
Follow by Email