ಹಳ್ಳೂರ : ಕೊರೊನಾ ಬಗ್ಗೆ ಮುಂಜಾಗೃತ ಕ್ರಮಗಳ ಬಗ್ಗೆ ಯೂಟ್ಯೂಬ್ ನೇರಪ್ರಸಾರ ಕಾರ್ಯಕ್ರಮ

ಕೊರೊನಾ ವೈರಾಣು ಸೋಂಕು ಹರಡದಂತೆ ಮುಂಜಾಗ್ರತೆಯ ಕ್ರಮಗಳ ಬಗ್ಗೆ ಇಂದು ಸಂಜೆ 4ಗಂಟೆಗೆ ಯೌಟ್ಯೂಬ್ ನೇರ ಪ್ರಸಾರ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಸಾರ್ವಜನಿಕರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಯಾವ ಕ್ರಮಗಳನ್ನು ಕೈಗೊಂಡು ತಮ್ಮ ವ್ಯಾಪ್ತಿಗೆ ಬರುವ ಜನರಿಗೆ ಈ ವೈರಸ್ ಹರಡುವ ಮುಂಚಿತವಾಗಿ ಏನೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕೆಂಬ ಮಾಹಿತಿ ಸಲುವಾಗಿ ಇಂದು ಗ್ರಾಮ ಗ್ರಾಮ ಪಂಚಾಯತಿಯಲ್ಲಿ ಯುಟ್ಯೂಬ್ ನೇರಪ್ರಸಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಗರ್ಭಿಣಿ ಮಹಿಳೆಯರಿಗೆ ಯಾವರೀತಿ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಮಾಹಿತಿ ಹಾಗೂ ಪರಸ್ಥಳದಿಂದ ಆಗಮಿಸಿದ ವ್ಯಕ್ತಿಗಳ ಮಾಹಿತಿ ಪಡೆದು ಅವರ ಆರೋಗ್ಯ ಬಗ್ಗೆ ಹೇಗೆಲ್ಲಾ ಪರಿಶೀಲನೆ ಮಾಡಬೇಕು ಎಂಬ ಮಾಹಿತಿಯನ್ನು ನೀಡಿದರು.
ನೇರಪ್ರಸಾರ ಕಾರ್ಯಕ್ರಮ ಮುಗಿದ ನಂತರ ಗ್ರಾಮ ಪಂಚಾಯತ್ ಪಿಡಿಒ ಎಚ್ ವೈ ತಾಳಿಕೋಟಿ ಮಾತನಾಡಿ ಎಲ್ಲ ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತರು ನಮ್ಮ ಗ್ರಾಮ ವ್ಯಾಪ್ತಿಯಲ್ಲಿ ಬರುವಂತಹ ಮನೆಗಳಿಗೆ ತೆರಳಿ ಕೊರೊನಾ ವೈರಸ್ ಬಗ್ಗೆ ಮಾಹಿತಿ ನೀಡಬೇಕೆಂದು ಹೇಳಿದರು.
ನಂತರ ಗ್ರಾಮದ ಎಲ್ಲೆಡೆ ಸೋಂಕು ನಿವಾರಕ ಪೊಗಿಂಗ್ ಹಾಗೂ ಕೆಮಿಕಲ್ ಸಿಂಪಡನೆ ಚಾಲನೆ ನೀಡಿದರು. ಗಲ್ಲಿಗಳಲ್ಲಿ ಹಾಗೂ ಮುಖ್ಯ ರಸ್ತೆಗಳು, ಒಳ ರಸ್ತೆಗಳು, ಚರಂಡಿಗಳು, ಸೇರಿದಂತೆ ಎಲ್ಲ ಸಾರ್ವಜನಿಕ ಪ್ರದೇಶಗಳಲ್ಲೂ ಸೋಂಕು ನಿವಾರಕ ಸಿಂಪಡಣೆ ಮಾಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಎಲ್ಲಾ ಸಿಬ್ಬಂದಿಗಳು, ಗ್ರಾಮ ಲೆಕ್ಕಾಧಿಕಾರಿ, ಪೊಲೀಸ್ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು
Share
WhatsApp
Follow by Email