ಚಿಕ್ಕಬಾಗೇವಾಡಿ ಗ್ರಾಮದಲ್ಲಿ ಶ್ರೀ ಗ್ರಾಮದೇವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಚಾಲನೆ

ಬೈಲಹೊಂಗಲ : ಸಮೀಪದ ಚಿಕ್ಕಬಾಗೇವಾಡಿ ಗ್ರಾಮದ ಶ್ರೀ ಗ್ರಾಮದೇವಿ ದೇವಸ್ಥಾನದಲ್ಲಿ ನೂತನವಾಗಿ ಗುರುವಾರ ಆರಂಭವಾದ ಶ್ರೀ ಗ್ರಾಮದೇವಿ ಪ್ರಾಥಮೀಕ ಕೃಷಿ ಪತ್ತಿನ ಸಹಕಾರಿ ಸಂಘದ ಆಶ್ರಯದಲ್ಲಿ ಸಾಲಮೇಳದ ಅಂಗವಾಗಿ ಸಂಘದ ವ್ಯಾಪ್ತಿಯ ಗ್ರಾಮಗಳ ರೈತರಿಗೆ ಸಾಲ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸುಧೀರ ಪಾಟೀಲ ಮಾತನಾಡಿ, ಈ ಸಂಘದಿoದ ಮುಂದಿನ ದಿನಗಳಲ್ಲಿ ರೈತರಿಗೆ ಅನಕೂಲವಾಗುವ ರೀತಿಯಲ್ಲಿ ವಿಶೇಷ ಕಾರ್ಯಯೋಜನೆಗಳನ್ನು ರೋಪಿಸಲಾಗುವದು.
ರೈತರಿಗೆ ಗೂಬ್ಬರ- ಬೀಜಗಳ ವಿತರಣೆ ಸೇರಿದಂತೆ ವಿವಿಧ ಯೋಜನೆಗಳನ್ನು ತಂದು ರೈತರ ಅಭಿವೃದಿಗೆ ಪ್ರಯತ್ನಿಸಲಾಗುವದೆಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಸಂಘದ ಉಪಾದ್ಯಕ್ಷ ಚಂದ್ರಶೇಖರ ಕಲ್ಲೂರ ರೈತರಿಗೆ ಶೇರು ಪತ್ರಗಳನ್ನು ವಿತರಿಸಿ ಮಾತನಾಡಿದರು. ನಿಂಗಪ್ಪ ಅತ್ತುಗೋಳ, ರಮೇಶ ಮೇಲಿನಮನಿ, ರಾಮನಗೌಡ ಪಾಟೀಲ, ಇಂಡಿಯನ ಗ್ಯಾಸ ವಿತರಕ ಸುಬಾಷ ಪಡೇನ್ನವರ, ವಿಶ್ವಜ್ಯೋತಿ ಶಿಕ್ಷಣ ಹಾಗೂ ಗ್ರಾಮಾಭಿವೃದ್ದಿ ಸಂಘದ ಅಧ್ಯಕ್ಷ ಭೀಮನಗೌಡ ಪಾಟೀಲ, ಮಲ್ಲಿಕ ಕುರಬರ, ಸಂಗಪ್ಪ ಬುಕ್ಕಟಗಿ ಹಾಗೂ ಸಂಘದ ಆಡಳಿತ ಮಂಡಳಿಯ ಸದಸ್ಯರು, ಸುತ್ತಮುತ್ತಲಿನ ಗ್ರಾಮದ ರೈತರು, ಶೇರುದಾರರು ಭಾಗವಹಿಸಿದ್ದರು. ಸಂಘದ ಕಾರ್ಯದರ್ಶಿ ಭರತ ಪಾರಿಶ್ವಾಡ ಸ್ವಾಗತಿಸಿ, ನಿರೂಪಿಸಿದರು
Share
WhatsApp
Follow by Email