ಬ್ರೇಕಿಂಗ್ ನ್ಯೂಸ್

ಹಾಸ್ಪಿಟಲ್ ಗೆ ಹೋಗಿ ಬರುವುದಾಗಿ ಹೇಳಿ ಮರಳಿ ಬಾರದೆ ಮಹಿಳೆ ಕಾಣೆ

ಮೂಡಲಗಿ : ಮೂಡಲಗಿ ತಾಲೂಕಿನ ನಾಗನೂರ ಗ್ರಾಮದ ನಿವಾಸಿಯಾದ ಬಾಳವ್ವ ಪ್ರಕಾಶ್ ನಾಯಕ್ ಅವರು ಕಾಣೆಯಾಗಿದ್ದು ಈ ಕುರಿತು ಮೊದಲಿಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾರ್ಚ್ 13 ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಗ್ರಾಮದ ನಾಯಕರು ತೋಟದ ಮನೆಯಿಂದ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮರಳಿ ಬಂದಿಲ್ಲ ಎಂದು ಕಾಣೆಯಾದ ಮಹಿಳೆಯ ಭಾವ( ಗಂಡನ ಅಣ್ಣ) ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಬಾಳವ್ವ ಪ್ರಕಾಶ್ ನಾಯಕ (28) ಕೆಂಪು ಮೈಬಣ್ಣ, ದೊಡ್ಡ ಮೈಕಟ್ಟು, ದುಂಡು ಮುಖ, ಎತ್ತರ 5.3 ಊಟ ಎತ್ತರ ಹಾಗೂ ಕನ್ನಡ ಭಾಷೆ ಮಾತನಾಡುತ್ತಾರೆ.

ಈ ಪ್ರಕಾರ ಚಿಹ್ನೆಯುಳ್ಳ ಮಹಿಳೆ ದೊರೆತರೆ ಮೂಡಲಗಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ : 08334-251333 ಹಾಗೂ ಮೂಡಲಗಿ ಸಿಪಿಐ ದೂರವಾಣಿ ಸಂಖ್ಯೆ : 08334-251499 ನ್ನು ಸಂಪರ್ಕಿಸಬೇಕು ಎಂದು ಮೂಡಲಗಿ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About the author

Mallu Bolanavar